ಅಮರಪಡ್ನೂರು: ಶೇಣಿಯ ಯುವಕ ಬೈಕ್ ಅಪಘಾತದಲ್ಲಿ ಮೃತ್ಯು

0

ಪುತ್ತೂರಿನ
ನರಿಮೊಗರು ಶಾಲೆಯ ಬಳಿ ಸುಬ್ರಹ್ಮಣ್ಯ- ಮಂಜೇಶ್ವರ ರಸ್ತೆಯಲ್ಲಿ ಬೈಕ್ ಮತ್ತು ಪಿಕ್ ಅಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಗಾಯಗೊಂಡಿದ್ದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತ ಪಟ್ಟ ಘಟನೆ ಡಿ.22 ರಂದು ವರದಿಯಾಗಿದೆ.

ಅಮರಪಡ್ನೂರಿನ ಶೇಣಿಯ ದಿ.ರವಿ ಎಂಬವರ ಪುತ್ರ ಗೌತಮ್(31) ಮೃತ ಪಟ್ಟ ದುರ್ದೈವಿ.

ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಗೌತಮ್ ರವರು ತಮ್ಮ ಗೆಳೆಯ ಕೊಡಿಯಾಲದ ಲೋಲಾಕ್ಷ ಎಂಬವರ ಬೈಕಿನಲ್ಲಿ ಹಿಂಬದಿ ಸವಾರನಾಗಿ ಸಂಚರಿಸುತ್ತಿರುವಾಗ ನರಿಮೊಗರು ಶಾಲೆಯ ಬಳಿ ಪಿಕ್ ಅಪ್ ಗೆ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ಬೈಕಿನ ಸವಾರರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡರು. ತಕ್ಷಣ ಸ್ಥಳೀಯರು ಸೇರಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಅವರಿಬ್ಬರನ್ನು ಮಂಗಳೂರಿನ
ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಗಂಭೀರ ಗಾಯಗೊಂಡಿದ್ದ ಪರಿಣಾಮವಾಗಿ ಸಹ ಸವಾರ ಶೇಣಿಯ ಯುವಕ ಗೌತಮ್ ರವರು ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ.
ಬೈಕ್ ಚಲಾಯಿಸುತ್ತಿದ್ದ ಲೋಲಾಕ್ಷ ರವರ
ಕಾಲಿನ ಮತ್ತು ಕೈಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.

ಮೃತರು ತಾಯಿ ಶ್ರೀಮತಿ ಜಯ, ಸಹೋದರ ರಾಕೇಶ್ , ಸಹೋದರಿ ಶಿಕ್ಷಕಿ ರಶ್ಮಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರವನ್ನು
ಪುತ್ತೂರಿನ ಸ್ಮಶಾನದಲ್ಲಿ ನೆರವೇರಿಸಲಾಯಿತು.