ಐವತ್ತೊಕ್ಲು : ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಸಭೆ – ಕಾರ್ಯನಿರ್ವಹಣಾ ಸಮಿತಿಯ ಪುನರ್ ರಚನೆ

0

ಅರಣ್ಯ ಸಂರಕ್ಷಣೆ ಎಲ್ಲರ ಹೊಣೆ : ವಲಯಾರಣ್ಯಾಧಿಕಾರಿ ಸಂಧ್ಯಾ

ಅರಣ್ಯ ಸಂಪತ್ತಿನ ರಕ್ಷಣೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯೊಂದಿಗೆ ನೇರವಾಗಿ ಭಾಗಿಯಾಗಬೇಕು ಎಂದು ಪಂಜ ವಲಯ ಅರಣ್ಯ ಅಧಿಕಾರಿ ಸಂಧ್ಯಾ ಹೇಳಿದರು.

ಪಂಜದ ಪೈಂದೋಡಿಯ ಶ್ರೀ ಸುಬ್ರಾಯ ಸ್ವಾಾಮಿ ಸಭಾಭವನದಲ್ಲಿ ನಡೆದ ಐವತ್ತೊಕ್ಲು ಗ್ರಾಮದ ಗ್ರಾಮ ಅರಣ್ಯ ಸಮಿತಿಯ 2023-24ನೇ ಸಾಲಿನ ವಾರ್ಷಿಕ ಮಹಾ ಸಭೆ ಮತ್ತು ಕಾರ್ಯ ನಿರ್ವಹಣಾ ಸಮಿತಿಯ ಪುನರ್ ರಚನೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐವತ್ತೊಕ್ಲು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಪುರುಷೋತ್ತಮ ನೆಕ್ಕಿಲ ವಹಿಸಿದ್ದರು.

ಇನ್ನೊರ್ವ ಮುಖ್ಯ ಅತಿಥಿ ಪಂಜ ಹೋಬಳಿ ಕಂದಾಯ ನಿರೀಕ್ಷಕ ರಂಜನ್ ಕಲ್ಕುಡಿ ಶುಭ ಹಾರೈಸಿದರು.

ಇದೇ ಸಂದರ್ಭ ನೂತನ ಕಾರ್ಯನಿರ್ವಹಣಾ ಸಮಿತಿಯನ್ನು ಪುನರ್ ರಚಿಸಲಾಯಿತು.

ವಲಯ ಅರಣ್ಯ ಅಧಿಕಾರಿ ಸಂಧ್ಯಾ ಮಾತನಾಡಿ ನೂತನ ಸಮಿತಿಗೆ ಕಾರ್ಯ ಚಟುವಟಿಕೆ ಬಗ್ಗೆ ವಿವರಿಸಿದರು.

ಸಮಿತಿಯ ನೂತನ ಅಧ್ಯಕ್ಷರಾಗಿ ಲಕ್ಷ್ಮಣ ಗೌಡ ಬೊಳ್ಳಾಾಜೆ, ಸದಸ್ಯರುಗಳಾಗಿ ದೇವಕಿ ಪಾಂಡಿಗದ್ದೆ, ದಾಮೋದರ ನಾಯ್ಕ, ನಿರ್ಮಲ ಕೆ.ಎಸ್, ಹೇಮಲತಾ ಪಲ್ಲೋಡಿ, ರತ್ನಾವತಿ ಬೊಳ್ಳಾಾಜೆ, ಲಿಗೋದರ ಆಚಾರ್ಯ, ಚಿನ್ನಪ್ಪ ಸಂಕಡ್ಕ, ಲೋಕೇಶ್ ಬರಮೇಲು, ಪುರುಷೋತ್ತಮ ನೆಕ್ಕಿಲ, ಭರತ್ ತೋಟ ಇವರುಗಳು ಆಯ್ಕೆಯಾದರು.

ಸಮಿತಿಯಲ್ಲಿ ಸುಮಾರು 20 ವರ್ಷಗಳಿಂದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಆನಂದ ಗೌಡ ಮಾಡಬಾಗಿಲು ಕಂಬಳ ಹಾಗೂ ನಿಕಟಪೂರ್ವ ಕಾರ್ಯದರ್ಶಿಯಾಗಿದ್ದ ಸಂತೋಷ್‌ಕುಮಾರ್ ರೈ ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ಅಗಸಿಮನಿ ಲೆಕ್ಕ ಪತ್ರ ಮತ್ತು ವರದಿ ಮಂಡಿಸಿದರು. ಐವತ್ತೊಕ್ಲು ಗಸ್ತು ಅರಣ್ಯ ಪಾಲಕ ಚಿದಾನಂದ ಬಿ. ಕಾರ್ಯಕ್ರಮ ನಿರೂಪಿಸಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.