ಅಮರಪಡ್ನೂರಿನ ಶೇಣಿಯಲ್ಲಿ ಕಳೆದ ಹಲವಾರು ಸಮಯಗಳಿಂದ ಮಾನಸಿಕ ಅಸ್ವಸ್ಥರಾಗಿ ತಿರುಗಾಡುತ್ತಿದ್ದ ಆನಂದ ಕಜೆಮೂಲೆಯವರನ್ನು ಮಂಜೇಶ್ವರದ ದೈಗೋಳಿಯ ಶ್ರೀ ಸಾಯಿ ಸೇವಾ ಪ್ರತಿಷ್ಠಾನ ದವರು ಆರೈಕೆ ಮಾಡುವ ಉದ್ದೇಶದಿಂದ ಕರೆದುಕೊಂಡು ಹೋಗಿರುತ್ತಾರೆ.
ಈ ಬಗ್ಗೆ ಮಾಧ್ಯಮದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವರದಿ ಪ್ರಕಟವಾಗಿತ್ತು.
ಈ ಬಗ್ಗೆ ಸ್ಥಳೀಯ ಪಂಚಾಯತ್ ಸದಸ್ಯ ಅಶೋಕ ಚೂಂತಾರು ರವರಮುತುವರ್ಜಿಯಿಂದ ನಿರ್ಗತಿಕ ಹಲವಾರು ಮಂದಿ ವೃದ್ಧರಿಗೆ ಆಸರೆ ನೀಡಿ ಅವರ ಬದುಕಿನಲ್ಲಿ ಹೊಸ ಚೈತನ್ಯ ತುಂಬುತ್ತಿರುವ ಸೇವಾಶ್ರಮಕ್ಕೆ ಕೊಡುಗೈ ದಾನಿಗಳಿಂದ ಹಾಗೂ ನಾಗರಿಕರಿಂದ ವಾಟ್ಸಾಪ್ ಗ್ರೂಪಿನ ಮೂಲಕ ಸಂಗ್ರಹಿಸಿದ ನಗದು
ರೂ. 72,680/- ಸಹಾಯ ಧನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮೇಘಶ್ಯಾಂ ಆಂಗ್ರಿ ದಂಪತಿಗಳು, ಸ್ಥಳೀಯರಾದ ಹರಿಪ್ರಸಾದ್ ರೈ, ಗುರು ಪ್ರಸಾದ್ ರೈ, ರಾಮಯ್ಯ ರೈ, ಆನಂದರವರ ಸಹೋದರ ಕುಶಾಲಪ್ಪ ಕಜೆಮೂಲೆ ಮತ್ತಿತರರು ಉಪಸ್ಥಿತರಿದ್ದರು.