ಅರಂಬೂರು ಭಾರದ್ವಾಜ ಆಶ್ರಮಕ್ಕೆ ಆಗಮಿಸಿದ ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ

0

ಶ್ರೀ ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕಾರಾಚಾರ್ಯ ಪೂಜ್ಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಯವರು ಅರಂಬೂರಿನ ಭಾರದ್ವಾಜಾಶ್ರಮಕ್ಕೆ ಇಂದು ಬೆಳಗ್ಗೆ ಆಗಮಿಸಿರುತ್ತಾರೆ.


ರಾಜ್ಯ ಹೆದ್ದಾರಿಯಿಂದ ಭಾರದ್ವಾಜ ಆಶ್ರಮಕ್ಕೆ ಕಾಂಚಿ ಕಾಮಕೋಟಿ ವೇದ ವಿದ್ಯಾಲಯದ ಬಳಗದವರು ಸ್ವಾಗತಿಸಿದರು.
ಬಳಿಕ ಮಹಾಸ್ವಾಮೀಜಿಯವರಿಂದ ಆಶೀರ್ವಚನ ನೆರವೇರಿತು.
ಆಶ್ರಮದ ವತಿಯಿಂದ ಪಾದಪೂಜೆಯನ್ನು ನೆರವೇರಿಸಲಾಯಿತು. ಆಶ್ರಮದಲ್ಲಿ ಹಿರಿಯಾರಾದ ಗಿರೀಶ್ ಭಾರದ್ವಾಜ್ ಹಾಗೂ ಭಾರದ್ವಾಜ ಸಹೋದರರು ಮತ್ತು ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.