ನೃತ್ಯಗುರು ಶ್ರೀಮತಿ ಚೇತನ ರಾಧಾಕೃಷ್ಣ ಮೂರ್ಜೆ ಭಾಗಿ
ಮಧ್ಯಪ್ರದೇಶ ರಾಜ್ಯ ಸರ್ಕಾರದ ವತಿಯಿಂದ ಮಧ್ಯಪ್ರದೇಶದ ಭೋಪಾಲ್ನಲ್ಲಿ ನ. 4 ರಿಂದ 6 ರವರೆಗೆ ಶಂಕರ ಸಾಂಸ್ಕೃತಿಕ ನ್ಯಾಸ ದವರು ಏರ್ಪಡಿಸಿದ “ಅದ್ವೈತ ಹಾಗು ನೃತ್ಯ” ಎಂಬ ಮೂರು ದಿನಗಳ ಕಾರ್ಯಾಗಾರದಲ್ಲಿ ನೃತ್ಯಗುರು ಶ್ರೀಮತಿ ಚೇತನ ರಾಧಾಕೃಷ್ಣ ಮೂರ್ಜೆ ಅವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಂಸ್ಕೃತಿಕ ಅನುರಣನೆಯನ್ನು ವ್ಯಕ್ತಪಡಿಸಿದ ಶ್ರೀಮತಿ ಚೇತನ ರಾಧಾಕೃಷ್ಣ ಅವರು ಶಂಕರಾಚಾರ್ಯರ ಏಕತ್ವದ ತತ್ತ್ವವನ್ನು ಪ್ರತಿಬಿಂಬಿಸುವ ಈ ಕಾರ್ಯಾಗಾರವು ಭಾರತೀಯ ಸಂಸ್ಕೃತಿಯ ಮಹತ್ವವನ್ನು ಮತ್ತೊಮ್ಮೆ ಪ್ರತಿಪಾದಿಸುವ ಮೂಲಕ, ನೃತ್ಯ ಮತ್ತು ಆಧ್ಯಾತ್ಮಿಕತೆಯ ನಡುವೆ ಒಂದು ಎಚ್ಚರಿಕೆಯ ಸೇತುವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂತರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ ಡಾ. ಪದ್ಮ ಸುಬ್ರಹ್ಮಣ್ಯಂ ಹಾಗೂ ಸ್ವಾಮಿನಿ ವಿಮಲಾನ…