ಡಿಸೆಂಬರ್ ತಿಂಗಳಲ್ಲಿ ಸಂಪಾಜೆ ಸಹಕಾರಿ ಸಂಘದ ಚುನಾವಣೆ ಹಿನ್ನೆಲೆ

0

ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಡಿಸೆಂಬರ್ ತಿಂಗಳ ಕೊನೆಯಲ್ಲಿ ಜರುಗಲಿರುವ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿಗಳ ಪಟ್ಟಿಯು ಬಿಡುಗೊಡೆಗೊಂಡಿದೆ.


ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಅವರ ಅಧ್ಯಕ್ಷತೆಯಲ್ಲಿ ನ.18ರಂದು ನಡೆದ ಪಕ್ಷದ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಯಿತು.

ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿಗಳಾಗಿ ಸೋಮಶೇಖರ ಕೊಯಿಂಗಾಜೆ, ಮಹಮ್ಮದ್ ಕುಂಞಿ ಗೂನಡ್ಕ, ಕೆ.ಪಿ. ಜಾನಿ ಕಲ್ಲುಗುಂಡಿ, ಯುಮುನ ಬಿ.ಎಸ್., ಉಷಾ ರಾಮ ನಾಯ್ಕ, ಸುಶೀಲ ಬಾಲಕೃಷ್ಣ, ಪ್ರಮೀಳ ಪೆಲ್ತಡ್ಕ, ಜಗದೀಶ್ ರೈ, ಸಂಜೀವ ಪೂಜಾರಿ, ಸಿಲ್ವಸ್ಟರ್ ಡಿಸೋಜ, ಜ್ಞಾನಶೀಲನ್ (ರಾಜು) ಹಾಗೂ ಪಿ.ಕೆ. ಅಬುಸಾಲಿ ಅವರನ್ನೊಳಗೊಂಡ ಹದಿಮೂರು ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು.