ಸುಳ್ಯದಲ್ಲಿ ಪ್ರಥಮ ಬಾರಿ ಸಾತ್ವಿಕ ವೀಣಾ ವಾದನ
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ) ಸುಳ್ಯ ಆಶ್ರಯದಲ್ಲಿ
ಮಹಾಬಲ- ಲಲಿತ ಕಲಾ ಸಭಾ(ರಿ.) ಪುತ್ತೂರು ವತಿಯಿಂದ ಡಿ.8 ರಂದು ಭಾನುವಾರ ಸಂಜೆ 5.45 ರಿಂದ ರಾತ್ರೆ 8.30 ರ ವರೆಗೆ ರಂಗಮನೆ ಅಡಿಟೋರಿಯಂನಲ್ಲಿ ಶಾಸ್ತ್ರೀಯ ಸಂಗೀತ ಸಂಭ್ರಮವನ್ನು ಏರ್ಪಡಿಸಲಾಗಿದೆ.
ದೇಶದ ಪ್ರಸಿದ್ಧ ಸಂಗೀತ ಕಲಾವಿದರಾದ ಪದ್ಮಭೂಷಣ ಪಂಡಿತ್ ವಿಶ್ವಮೋಹನ ಭಟ್ ರವರ ಸುಪುತ್ರ, ತಂತಿ ಸಾಮ್ರಾಟ್ ಎಂದೇ ಖ್ಯಾತರಾದ ಪಂಡಿತ್ ಸಲಿಲ್ ವಿ.ಭಟ್ ರವರಿಂದ ಸಾತ್ವಿಕ ವೀಣಾ ವಾದನ ಹಾಗೂ ಸುರಮಣಿ ಮಹಾಲಕ್ಷ್ಮೀ ಶೆಣೈ ಕಾರ್ಕಳ ಇವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಹಿಮ್ಮೇಳ ಕಲಾವಿದರಾಗಿ ತಬಲದಲ್ಲಿ ಶ್ರೀ ಹಿಮಾಂಶು ಮಹಂತ್ ವಡೋದರ ಮತ್ತು ಹಾರ್ಮೋನಿಯಂನಲ್ಲಿ ವಿಶ್ವನಾಥ್ ಭಟ್ ಎಣ್ಣೆಹೊಳೆ ಇವರು ಸಹಕರಿಸಲಿದ್ದಾರೆ.
ಅಪರೂಪದ ಕಲೆಯಾಗಿರುವ ಸಾತ್ವಿಕ ವೀಣಾ ವಾದನವು ಸುಳ್ಯ ತಾಲೂಕಿನಲ್ಲಿ ನಡೆಯುತ್ತಿರುವುದು ಇದುವೇ ಪ್ರಥಮವಾಗಿದ್ದು ಸಂಗೀತ ಪ್ರೇಮಿಗಳಿಗೆ ವಿಶೇಷ ಅನುಭವ ನೀಡಲಿದೆ. ಸಮಯಕ್ಕೆ ಸರಿಯಾಗಿ ಆರಂಭವಾಗಲಿರುವ ಈ ಕಾರ್ಯಕ್ರಮಕ್ಕೆ ಹತ್ತು ನಿಮಿಷ ಬೇಗನೇ ಬರಲು ಮತ್ತು ಪ್ರವೇಶ ಉಚಿತವಾಗಿರುತ್ತದೆ ಎಂದು ರಂಗಮನೆಯ ಅಧ್ಯಕ್ಷರಾದ ಡಾ| ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.