ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ಜನಜಾಗೃತಿ ಧರ್ಮಕ್ಷೇತ್ರ ಯಕ್ಷಗಾನ ಪ್ರಸಂಗ

0

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ವಸ್ತು ಪ್ರದರ್ಶನ ಕಲಾ ವೇದಿಕೆಯಲ್ಲಿ ಸುಳ್ಯ ಜನಜಾಗೃತಿ ವೇದಿಕೆಯ ಸದಸ್ಯರಾದ ಪದ್ಮನಾಭ ಜೈನ್ ರವರ ಸಾಹಿತ್ಯ ಮತ್ತು ನಿರ್ದೇಶನದ ಜನಜಾಗೃತಿ ಧರ್ಮಕ್ಷೇತ್ರ (ಮದ್ಯ ವರ್ಜನ) ಎಂಬ ಕನ್ನಡ ಯಕ್ಷಗಾನ ಪ್ರಸಂಗ ಪ್ರದರ್ಶನ ವಾಯಿತು.

ಹಿಮ್ಮೇಳದಲ್ಲಿ ಪದ್ಮನಾಭ ಪಳ್ಳಿಗದ್ದೆ ಬಿಳಿನೆಲೆ, ಕುಮಾರ ಸುಬ್ರಹ್ಮಣ್ಯ ವಳಕುಂಜ, ಬಾಲಕೃಷ್ಣ ಬೊಮ್ಮಾರು, ಶೇಖರ ಮಣಿಯಾಣಿ ಸುಳ್ಯ, ಭೋಜಪ್ಪ ಗೌಡ ಮರ್ಕಂಜ,
ಮುಮ್ಮೇಳದಲ್ಲಿ ಲಕ್ಷ್ಮಣ ಆಚಾರ್ಯ ಎಡಮಂಗಲ, ಯತೀಶ್ ರೈ ದುಗಲಡ್ಕ, ಪದ್ಮನಾಭ ಜೈನ್ ಬಲ್ನಾಡುಪೇಟೆ,
ನಾಗಪ್ಪ ಎಡಮಂಗಲ ರವಿಚಂದ್ರ ನೆಲ್ಯಾಡಿ, ರವಿಚಂದ್ರ ಚೆಂಬು, ಈಶ್ವರ ಪ್ರಸಾದ್, ರಮೇಶ್ ಬೂಡು,
ಶೇಖರ ಬೆಟ್ಟಂಪಾಡಿ, ರಾಘವೇಂದ್ರ,ಪ್ರೀತಮ್,ಯೋಗೀಶ್ ,ಶಿವಕೀರ್ತನ್ ಸಹಕರಿಸಿದರು