ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ದೈವಗಳ ಭಂಡಾರ ಆಗಮನ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಪ್ರಯುಕ್ತ ದೇವರಗದ್ದೆಯ ಹೊಸಳಿಗಮ್ಮ ದೈವದ ಗುಡಿಯಿಂದ ಲಕ್ಷದೀಪೋತ್ಸವದ ದಿನವಾದ ಇಂದು ಶ್ರೀ ದೈವದ ಭಂಡಾರವು ದೇವಳಕ್ಕೆ ಮುಂಜಾನೆ ಆಗಮಿಸಿತು. ದೇವರಗದ್ದೆಯ ಹೊಸಳಿಗಮ್ಮ ದೈವದ ಗುಡಿಯಲ್ಲಿ ಪೂಜೆ ನೆರವೇರಿತು. ಪುರೋಹಿತರು ವಿದಿವಿಧಾನಗಳನ್ನು ನೆರವೇರಿಸಿದರು.


ಬಳಿಕ ಪೂರ್ವಶಿಷ್ಠ ಸಂಪ್ರದಾಯ ಪ್ರಕಾರ ಶ್ರೀ ದೇವಳಕ್ಕೆ ದೈವದ ಭಂಡಾರವನ್ನು ಬ್ಯಾಂಡ್, ಮಂಗಳವಾದ್ಯ ಮತ್ತು ಬಿರುದಾವಳಿಗಳೊಂದಿಗೆ ತರಲಾಯಿತು. ಶ್ರೀ ದೇವಳದ ಹೊಸಳಿಗಮ್ಮ ಗುಡಿಯಲ್ಲಿ ಭಂಡಾರವನ್ನು ಇರಿಸಿದ ಬಳಿಕ ಪುರೋಹಿತರು ಪೂಜೆ ನೆರವೇರಿಸಿ, ಪ್ರಸಾದ ನೀಡಿದರು.