ಅಟೋರಿಕ್ಷಾ ಚಾಲಕರ ಸಂಘದಿಂದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ

0

ವಿಜೃಂಬಿಸಿದ ಯಕ್ಷ- ಗಾನ- ನಾಟ್ಯ -ವೈಭವ

ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘದ ಬಿ.ಎಂ.ಎಸ್ ಸಂಯೋಜಿತ ಇದರ ವತಿಯಿಂದ 25ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು ವೇದಮೂರ್ತಿ ಪುರೋಹಿತ ನಾಗರಾಜ ಭಟ್ ಬಳಗದಿಂದ ನ.30 ರಂದು ಶ್ರೀ ಚೆನ್ನಕೇಶವ ದೇವಾಲಯದ ಸಭಾಂಗಣದಲ್ಲಿ ನಡೆಯಿತು.

ಬೆಳಿಗ್ಗೆ ಪೂಜೆ ಪ್ರಾರಂಭ ಗೊಂಡು, ಪೂಜಾ ಸಂಕಲ್ಪ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

ಸನ್ಮಾನ ಕಾರ್ಯಕ್ರಮ:

ಸುಮಾರು 25 ವರ್ಷಗಳ ಕಾಲ ನಿರಂತರವಾಗಿ ಸಂಘದ ಶನೈಶ್ಚರ ಪೂಜೆಗೆ ವೈದಿಕರಾಗಿದ್ದ ಪುರೋಹಿತ ನಾಗರಾಜ ಭಟ್ ದಂಪತಿಗಳನ್ನು ಹಾಗೂ ಶನೈಶ್ಚರ ಪೂಜೆಗೆ ದೇವಾಲಯದಲ್ಲಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿಸಿದ ಆನುವಂಶಿಕ ಆಡಳಿತ ಮೊಕ್ತೇಸರರಾದ ಹರಪ್ರಸಾದ್ ತುದಿಯಡ್ಕ ದಂಪತಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಅಟೋರಿಕ್ಷಾ ಚಾಲಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ವಹಿಸಿದ್ದರು. ಅಟೋರಿಕ್ಷಾ ಚಾಲಕರ ಸಂಘದ ಸ್ಥಾಪಕಾಧ್ಯಕ್ಷ ಗೋಪಾಲಕೃಷ್ಣ ಭಟ್ ಸನ್ಮಾನ‌ ನೆರವೇರಿಸಿ ಶುಭ ಹಾರೈಸಿದರು. ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಘದ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ ವಂದಿಸಿದರು. ಜತೆ ಕಾರ್ಯದರ್ಶಿ ಸುರೇಂದ್ರ ಕಾಮತ್ ಜಯನಗರ ಕಾರ್ಯಕ್ರಮ ನಿರೂಪಿಸಿದರು.

ಯಕ್ಷ-ಗಾನ-ನಾಟ್ಯ-ವೈಭವ

ಸಮಾರಂಭದ ಬಳಿಕ ಯಕ್ಷ ಗಾನ ನಾಟ್ಯ ವೈಭವ ನಡೆಯಿತು. ಭಾಗವತರಾಗಿ ಯಕ್ಷ ಯುವ ರತ್ನ ಧೀರಜ್ ರೈ ಸಂಪಾಜೆ, ಗಾನ ಕೋಗಿಲೆ ಭವ್ಯ ಶ್ರೀ ಕುಲ್ಕುಂದ, ಮುಮ್ಮೇಳದಲ್ಲಿ ದಿವಾಕರ ರೈ ಸಂಪಾಜೆ ಹಾಗೂ ಸಂತೋಷ್ ಕುಮಾರ್ ಹಿಲಿಯಾಣ, ಚೆಂಡೆ ಮದ್ದಳೆಯಲ್ಲಿ ರೋಹಿತ್ ಉಚ್ಚಿಲ, ಶ್ರೀಧರ ವಿಟ್ಲ, ಚಕ್ರತಾಳದಲ್ಲಿ ನಿಶ್ವತ್ ಜೋಗಿ ಸಹಕರಿಸಿದರು. ದುರ್ಗಾಕುಮಾರ್ ನಾಯರ್ ಕೆರೆ ಕಾರ್ಯಕ್ರಮ‌ ನಿರೂಪಿಸಿದರು.

ಪೂಜೆಯಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಸಂಘದ ಎಲ್ಲ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.