ಇತ್ತೀಚಿಗೆ ಅಗ್ನಿ ಅನಾಹುತಕ್ಕೆ ಒಳಗಾಗಿ ಮನೆ ಕಳೆದುಕೊಂಡಿರುವ ಚೆಂಬು ಗ್ರಾಮದ ಉಂಬಳೆಯ ಶ್ರೀ. ಭಾಸ್ಕರನವರ ಮನೆಯ ಪುನರ್ನಿರ್ಮಾಣಕ್ಕೆ ನೆರವು ನೀಡುವ ಶ್ರಮದಾನ ಕಾರ್ಯವನ್ನು ಚೆಂಬು ಶ್ರೀ ಭಗವಾನ್ ಸಂಘದಿಂದ ನಿನ್ನೆ ಆಯೋಜಿಸಲಾಗಿತ್ತು.

ಸಂಪಾಜೆ ಗ್ರಾಮದ ಹಳೆಯ ಮನೆಯೊಂದನ್ನು ಸಂಪೂರ್ಣವಾಗಿ ಬಿಚ್ಚಿ ,ಸಂಗ್ರಹವಾದ ಹೆಂಚು ,ಮರಮುಟ್ಟುಗಳನ್ನು ಉಂಬಳೆಗೆ ಸಾಗಿಸಿ ಮನೆಯ ಪುನರ್ನಿರ್ಮಾಣಕ್ಕೆ ಬೇಕಾದ ಪೂರಕ ವ್ಯವಸ್ಥೆ ಮಾಡಿಕೊಡಲಾಯಿತು.
ಸಂಘದ ಪ್ರಮುಖರಾದ ಶ್ರೀ. ಅನಂತ್ ಊರುಬೈಲುರವರ ನೇತೃತ್ವದಲ್ಲಿ ಸಂಘದ ಸುಮಾರು ಇಪ್ಪತ್ತೈದಕ್ಕೂ ಅಧಿಕ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು.
