ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮಾರು -ತುಂಬೆತ್ತಡ್ಕ ರಸ್ತೆಯ ಡಾಮಾರು ಎದ್ದು ಹೋಗಿ ವಾಹನಗಳಿಗೆ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಈ ಭಾಗದ ಫಲಾನುಭವಿಗಳು ಡಿ.1ರಂದು ಪಿಕಪ್ ನಲ್ಲಿ ಮಣ್ಣು ತಂದು ಹಾಕುವುದರ ಮೂಲಕ ಹದಗೆಟ್ಟ ರಸ್ತೆಯನ್ನು ಶ್ರಮದಾನದ ಮೂಲಕ ತಾತ್ಕಲಿಕ ದುರಸ್ಥಿ ಮಾಡಿದರು.
ಕಾಂಕ್ರೀಟ್ ಗೆ ಅನುದಾನ :
ಇದೇ ರಸ್ತೆಯ ಕುಕ್ಕುತಗುಂಡಿ ಎಂಬಲ್ಲಿ ರಸ್ತೆ ತೀರಾ ಹದಗೆಟ್ಟಲ್ಲಿಗೆ ಪಂಚಾಯತ್ ನಿಂದ ಕಾಂಕ್ರೀಟ್ ಮಾಡಲು ಅನುದಾನ ಮಂಜೂರುಗೊಂಡಿದ್ದು, ಇನ್ನು ಕೆಲವೇ ದಿನದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಪಂಚಾಯತ್ ಸದಸ್ಯ ವೇಣುಗೋಪಾಲ ತುಂಬೆತ್ತಡ್ಕ ತಿಳಿಸಿದ್ದಾರೆ.
ಶ್ರಮದಾನದ ಹಿಂದಿನ ದಿನದ ರಾತ್ರಿ ರಸ್ತೆಯಲ್ಲಿ ಅಡಿಕೆ ಗಿಡ ನೆಟ್ಟರು: ರಸ್ತೆ ಹದಗೆಟ್ಟ ಬಗ್ಗೆ ಈ ಭಾಗದವರು ಸೇರಿ ನ.29ರಂದು ಶ್ರಮದಾನ ಮಾಡುವುದೆಂದು ವಾಟ್ಸಪ್ ಗ್ರೂಪ್ ನಲ್ಲಿ ಸಂದೇಶ ಹಾಕಿದ್ದರು. ಹಾಗಿದ್ದರೂ ಶ್ರಮದಾನದ ಹಿಂದಿನ ದಿನ ರಾತ್ರಿ ರಸ್ತೆಯಲ್ಲಿ ಅಡಿಕೆ ಗಿಡಗಳನ್ನು ನೆಟ್ಟುರುವುದು ಶ್ರಮದಾನದ ದಿನ ಬೆಳಿಗ್ಗೆ ಕಂಡು ಬಂತು.