ಸಾಧನೆಯ ಜೊತೆಗೆ ಮನೋಧರ್ಮವನ್ನು ಮರೆಯಬೇಡಿ – ಡಾ. ಉಜ್ವಲ್ ಯು.ಜೆ
ವಿದ್ಯಾರ್ಥಿಗಳ ತಮ್ಮ ಪದವಿಯ ನಂತರ ಬರೆಯಬಹುದಾದ ಪರೀಕ್ಷೆಗಳ ಬಗ್ಗೆ ಈಗಲೇ ಪರೀಕ್ಷೆಯ ಪೂರ್ವತಯಾರಿಯ ಬಗ್ಗೆ ಮಾಹಿತಿ ಕಾರ್ಯಗಾರ ನೆಡೆಸುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ತಮ್ಮ ಗುರಿಯನ್ನು ಈಗಲೇ ನಿರ್ಧರಿಸಲು ಇದು ಪೂರಕವಾಗುತ್ತದೆ. ಯಾವುದೇ ಸಾಧನೆಯ ಜೊತೆಗೆ ಮನೋಧರ್ಮವನ್ನು ಮರೆಯಬೇಡಿ ಎಂದು ಅಮರಜ್ಯೋತಿ ಪಿಯು ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಹೇಳಿದರು.
ಅವರು ಡಿ. 2ರಂದು ಕೆ.ವಿ.ಜಿ. ಅಮರಜ್ಯೋತಿ ಪಿಯು ಕಾಲೇಜಿನ ಪೋಷಕರ -ಶಿಕ್ಷಕರ ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ ಮಾತನಾಡುತ್ತಾ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಸುವುದೇ ನಮ್ಮ ಗುರಿ. ವಿದ್ಯಾರ್ಥಿಗಳಿಗಿಂತಪೋಷಕರಿಗೆ ಹೆಚ್ಚು ಜವಾಬ್ದಾರಿ ಇರಬೇಕು. ನಮ್ಮ ಸಂಸ್ಥೆಯ ಶಿಸ್ತುಗಳೇನಿದ್ದರೂ ಅದು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಮುಂದಿನ ವರ್ಷ ಡಿಸೆಂಬರ್ ತಿಂಗಳಲ್ಲಿ ನಮ್ಮ ಸಂಸ್ಥೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ಇದೆ ಎಂದರು. ಉಪಪ್ರಾಂಶುಪಾಲರಾದ ದೀಪಕ್ ವೈ.ಆರ್. ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ದೀಪಕ್ ವೈ.ಆರ್. ಕಾಲೇಜಿನ ಶಿಸ್ತು ಸಂಯಮಗಳ ಬಗ್ಗೆ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಅಭಿಜ್ಞಾ ವಂದಿಸಿದರು.
ಉಪನ್ಯಾಸಕಿ ಭವ್ಯ ಸಿ.ಟಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಮಾಹಿತಿ ನೀಡಿದರು.
ಉಪನ್ಯಾಸಕಿ ಮಲ್ಲಿಕಾ ಎಂ.ಎಲ್. ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವೃಂದ, ಪೋಷಕರು ಸಭೆಯಲ್ಲಿ ಭಾಗವಹಿಸಿದ್ದರು.