ದಿವ್ಯಾಂಗ ಚೇತನ ಮಕ್ಕಳಿಗೆ ಸ್ಪೂರ್ತಿ ತುಂಬುವ ಸಂವಾದ ಕಾರ್ಯಕ್ರಮ
ಸುಳ್ಯದ ಕಿವಾನಿ ಸಂಸ್ಥೆಯ ಬೆಳಕು ಗ್ರೂಪ್ ವತಿಯಿಂದ ಕುಟುಂಬ ಸಮ್ಮಿಲನ ಹಾಗೂ ವಿಕಲಚೇತನ ಮಕ್ಕಳಿಗೆ ಆತ್ಮ ಸ್ಥೈರ್ಯ ತುಂಬುವ ಸಂವಾದ ಕಾರ್ಯಕ್ರಮವು ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನ ರಂಗ ಮಯೂರಿ ಕಲಾ ಶಾಲೆಯಲ್ಲಿ ಇಂದು ನಡೆಯಿತು.
ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಚಂದ್ರ ಗೌಡ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು. “ವಿಕಲಾಂಗ ಚೇತನರು ಸ್ವಾವಲಂಬಿ ಜೀವನ ನಡೆಸಲು ಕಿವಾನಿ ಸಂಸ್ಥೆ ಸುಳ್ಯದಲ್ಲಿ ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ. ಇದನ್ನು ಇಲ್ಲಿ ಮಾಡಿರುವ ರಜನಿಕಾಂತ್ ಕೂಡಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸೇವೆ ನಿರಂತರ ಮುಂದುವರಿಯಲಿ” ಎಂದು ಹೇಳಿದರು.
ಸುಳ್ಯ ಸಾಂದೀಪ್ ವಿಶೇಷ ಚೇತನರ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಸದಾಶಿವ ರವರು ಮಾತನಾಡಿ”
ದಿವ್ಯಾಂಗ ಚೇತನರಿಗೆ ಹೊಸ ಬಾಳನ್ನು ನೀಡಿ ಅವರ ಬದುಕಿನಲ್ಲಿ ಆತ್ಮ ವಿಸ್ವಾಸ ತುಂಬುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಬೆಳಕು ಸಂಸ್ಥೆಯಿಂದ ಬೆಳಗಿದ ಜ್ಯೋತಿ ರಾಜ್ಯದಾದ್ಯಂತ ಪಸರಿಸುತ್ತಿದೆ. ವಿಶಿಷ್ಟ ಸಾಮರ್ಥ್ಯದ ಯುವಕ ಯುವತಿಯರಿಗೆ ಉದ್ಯೋಗ ನೀಡಿರುವುದು ಮಾತ್ರವಲ್ಲ ಆತ್ಮ ಸ್ಥೈರ್ಯ ತುಂಬಿರುವ ರಶ್ಮಿ ರಜನಿಕಾಂತ್ ದಂಪತಿಯವರ ಕಾರ್ಯ ಅಭಿನಂದನೀಯ.
ವಿಕಲ ಚೇತನರ ವ್ಯಕ್ತಿತ್ವವನ್ನು ಬದಲಾಯಿಸುವ ಮೂಲಕ ಬೆಳಕು ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ
ಸುಳ್ಯ ಸುದ್ದಿ ಬಿಡುಗಡೆ ಸಂಸ್ಥೆಯ ಸಂಪಾದಕರಾದ ಹರೀಶ್ ಬಂಟ್ವಾಳ್ ಮುಖ್ಯ ಅತಿಥಿಗಳಾಗಿದ್ದರು.
ಕಿವಾನಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸತ್ಯಮೂರ್ತಿಯವರು ಬೆಂಗಳೂರಿನಿಂದ ಆನ್ ಲೈನ್ ಮೂಲಕ ಶುಭಹಾರೈಸಿದರು. ಇದಕ್ಕಾಗಿ ಟಿ.ವಿ. ಪರದೆ ಸಿದ್ಧಪಡಿಸಲಾಗಿತ್ತು.
ದಿವ್ಯಾಂಗ ಚೇತನ ಬಾಲಕಿ ಕು.ನಿಶ್ಮಿತಾ ಅತ್ಯಡ್ಕ ಳಿಗೆ ಸಂಸ್ಥೆಯ ವತಿಯಿಂದ ಪ್ರೋತ್ಸಾಹ ಧನ ನೀಡಲಾಯಿತು.
ಬಳಿಕ ವಿಕಲ ಚೇತನ ಮಕ್ಕಳ ಪ್ರಶ್ನೆಗಳಿಗೆ ಎಂ.ಬಿ.ಸದಾಶಿವ ರವರು ಸಂವಾದದ ಮೂಲಕ ಸ್ಪೂರ್ತಿ ತುಂಬುವ ಉತ್ತರ ನೀಡಿದರು.
ಬೆಳಕು ಸಂಸ್ಥೆಯ ಮುಖ್ಯಸ್ಥರಾದ ರಜನಿಕಾಂತ್ ಉಮ್ಮಡ್ಕ ರವರು ಕಾರ್ಯಕ್ರಮ ಸಂಯೋಜಿಸಿದರು.
ತನುಷ್ ಬಿ.ಆರ್. ಪ್ರಾರ್ಥನೆ ಹಾಡಿದರು.
ಕು. ಆಶಿಕಾ ಸ್ವಾಗತಿಸಿದರು.
ನಿತಿನ್ ವಂದಿಸಿದರು.
ಶ್ರೀಮತಿರಶ್ಮಿರಜನಿಕಾಂತ್ ಮತ್ತು ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು.
ಕಿವಾನಿ ಬೆಳಕು ಸಂಸ್ಥೆಯ ಉದ್ಯೋಗಿಗಳು ಸಹಕರಿಸಿದರು. ಮಕ್ಕಳ ಪೋಷಕರು ಭಾಗವಹಿಸಿದರು.