ಆರ್.ಎಂ.ಎಸ್. ಎ ಸಂಪಾಜೆ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಪ್ರಕೃತಿ ನಡಿಗೆ

0

ದ.ಕ ಸಂಪಾಜೆ ಆರ್.ಎಂ.ಎಸ್. ಎ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪ್ರಕೃತಿ ನಡಿಗೆ ಕಾರ್ಯಕ್ರಮವು ನ.30 ರಂದು ನಡೆಯಿತು.

ಕಾರ್ಯಕ್ರಮವು ಬೆಳಿಗ್ಗೆ ಸಂಪಾಜೆಯ ಗಡಿಕಲ್ಲಿನಿಂದ ಚಾಲನೆಗೊಂಡಿತು. ಬಳಿಕ ಅರೆಕಲ್ಲಿನ ಜೇಡ್ಲ ಗೋಶಾಲೆಯಲ್ಲಿ ಗೋವುಗಳ ವೀಕ್ಷಣೆ , ದೇವಸ್ಥಾನ ಮಾಹಿತಿ ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಅರಣ್ಯದ ಮಹತ್ವ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕಲ್ಲುಗುಂಡಿಯ ಕೀರ್ತಿ ಕ್ಲಿನಿಕ್ ನ ಮಾಲಿಕ ಡಾ. ಜಯರಾಮ ಊಟ- ಉಪಹಾರ ವ್ಯವಸ್ಥೆ ಪ್ರಾಯೋಜಕತೆಯನ್ನು ವಹಿಸಿದರು. ಈ ಸಂದರ್ಭದಲ್ಲಿ ಶಾಲೆಯ 8, 9, 10ನೇ ತರಗತಿಯ ವಿದ್ಯಾರ್ಥಿಗಳು , ಶಿಕ್ಷಕ ವೃಂದ, ಅರಣ್ಯ ಅಧಿಕಾರಿ – ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.