ಐವರ್ನಾಡು ಗ್ರಾಮದ ದೇರಾಜೆಯ ನೆಲ್ಲಿಗದ್ದೆ ಎಂಬಲ್ಲಿ ಎರಡು ತಿಂಗಳ ಹಿಂದೆ ಮಳೆಯಿಂದ ಕೊಚ್ಚಿ ಹೋಗಿದ್ದ ಸೇತುವೆಯನ್ನು ದುರಸ್ತಿ ಪಡಿಸಿಕೊಡುವ ಮೂಲಕ ದೇರಾಜೆ ಗೆಳೆಯರ ಬಳಗದ ಸದಸ್ಯರು ನೆರವಿಗೆ ಬಂದಿದ್ದಾರೆ.
ಸೇತುವೆ ಸರಿಪಡಿಸದೇ ಇದ್ದ ಕಾರಣ ಅಲ್ಲಿಯ ಸ್ಥಳೀಯ ಮನೆಯವರಿಗೆ ತುಂಬಾ ತೊಂದರೆಯಾಗಿತ್ತು.
ರಸ್ತೆಯ ಸಂಪರ್ಕವು ಕಡಿತವಾಗಿತ್ತು ಇದರಿಂದಾಗಿ ರಾಮಚಂದ್ರ ಗೌಡ ಗುತ್ತಿಗಾರುಮೂಲೆ ಅವರ ಅಕ್ಕ
ಅನಾರೋಗ್ಯದಿಂದ 250 ಮೀಟರ್ ನಷ್ಟು ದೂರಕ್ಕೆ ರಸ್ತೆ ಸಂಪರ್ಕವಿಲ್ಲದೆ ಅವರನ್ನು ಎತ್ತಿಕೊಂಡು ಹೋಗುವಂತ ದಯನೀಯ ಸ್ಥಿತಿ ನಿರ್ಮಾಣವಾಗಿತ್ತು.
ಇದಕ್ಕೆ ಸ್ಪಂದಿಸಿದ ದೇರಾಜೆ ಗೆಳೆಯರ ಬಳಗದವರು ಮನೆಯವರ ಸಹಕಾರದೊಂದಿಗೆ ಸುಮಾರು ರೂ.24,000 ವೆಚ್ಚದಲ್ಲಿ ಸೇತುವೆಯನ್ನು ದುರಸ್ತಿ ಮಾಡಿ ತಾತ್ಕಾಲಿಕ ಸಂಪರ್ಕವನ್ನು ಮಾಡಿದೆ.