ಗೌರವಾಧ್ಯಕ್ಷ : ಶಿವರಾಮ ಕಜೆಮೂಲೆ, ಅಧ್ಯಕ್ಷ: ಗಂಗಾಧರ ತೋಟದ ಮೂಲೆ
ಕಾರ್ಯದರ್ಶಿ: ದಿನೇಶ್ ಪಾಂಡಿಪಾಲು, ಕೋಶಾಧಿಕಾರಿ: ರಘುರಾಮ ಕೋಟೆಬನ
ಯುವಕ ಮಂಡಲ ಕಳಂಜ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಗಂಗಾಧರ ತೋಟದ ಮೂಲೆ, ಕಾರ್ಯದರ್ಶಿಯಾಗಿ ದಿನೇಶ್ ಪಾಂಡಿಪಾಲು ಅವರನ್ನು ಆಯ್ಕೆಮಾಡಲಾಯಿತು.
ಗೌರವಾಧ್ಯಕ್ಷರಾಗಿ ಶಿವರಾಮ ಕಜೆಮೂಲೆ, ಉಪಾಧ್ಯಕ್ಷರಾಗಿ ಶಿವಪ್ರಸಾದ್ ಮುಂಡುಗಾರು, ಕೋಶಾಧಿಕಾರಿ ರಘುರಾಮ ಕೋಟೆಬನ, ಕ್ರೀಡಾ ಕಾರ್ಯದರ್ಶಿ ಚಂದ್ರಶೇಖರ ಕಜೆಮೂಲೆ, ಸಾಂಸ್ಕೃತಿಕ ಕಾರ್ಯದರ್ಶಿ ಜನಾರ್ಧನ ಪೂಜಾರಿ ಶೇಣಿ ಇವರನ್ನು ಆಯ್ಕೆಯಾದರು. ಆಡಳಿತ ಮಂಡಳಿ ನಿರ್ದೇಶಕರಾಗಿ ಸುನಿಲ್ ಪಟ್ಟೆ, ನಿತಿನ್ ತೋಟದಮೂಲೆ, ಚಂದ್ರಶೇಖರ ಕೋಟೆ ಇವರನ್ನು ಆಯ್ಕೆಯಾದರು.
ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು ಯುವಕ ಮಂಡಲದ ಅಧೀನದಲ್ಲಿರುವ ಶ್ರೀ ಮಂಜುನಾಥ ಭಜನಾ ಸಮಿತಿಯ ಸಂಚಾಲಕರಾಗಿ ಚಂದ್ರಶೇಖರ ಕೋಟೆ, ಉಪ ಸಂಚಾಲಕರಾಗಿ ನಾರಾಯಣ ಕೋಡಿಯಡ್ಕ ಅವರನ್ನು ಆಯ್ಕೆಮಾಡಲಾಯಿತು.
ಕ್ರೀಡಾ ಸಮಿತಿ ರಚಿಸಲಾಗಿದ್ದು, ಎಂ.ಆರ್ ನಾರಾಯಣ, ಸತೀಶ್ ದಳ, ಗುರುವ ಮುಂಡುಗಾರು, ಸತೀಶ ಎ.ವಿ, ಶಿವಪ್ರಸಾದ್ ತಂಟೆಪ್ಪಾಡಿ, ನಿತೇಶ್ ಪಟ್ಟೆ, ಜೀವನ್ ಪಟ್ಟೆ ಇವರುಗಳಿರುವರು. ಸಾಂಸ್ಕೃತಿಕ ಸಮಿತಿಯ ಸದಸ್ಯರುಗಳಾಗಿ ಈಶ್ವರ ವಾರಣಾಸಿ, ವಿಶ್ವನಾಥ ಮೊಟುಕಾನ, ಅಶ್ವಿನ್ ಮುಂಡುಗಾರು, ಬಾಲಸುಬ್ರಹ್ಮಣ್ಯ ಪ್ರಭು, ರಮೇಶ್ ಕೋಡಿಯಡು ಇವರುಗಳಿದ್ದಾರೆ.