ಸುಳ್ಯದಲ್ಲೊಂದು ವಿಶೇಷ ಕಲಾ ತಂಡ ಜಟಾಯು : ದೇವರಕಾನ ಶಾಲೆಗೆ ಕ್ರೀಡಾ ಸಾಮಗ್ರಿ ಕೊಡುಗೆ

0

ಸುಳ್ಯದಲ್ಲಿ ಕಳೆದ ಮೂರು ವರ್ಷಗಳಿಂದ, ಸುಳ್ಯ ದಸರಾ ಉತ್ಸವದಲ್ಲಿ ಕಲಾ ಪ್ರದರ್ಶನ ನೀಡುತ್ತಿರುವ ಜಟಾಯು ಕಲಾ ತಂಡವು, ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸುಳ್ಯದ ಹಲವಾರು ಶಾಲೆಗಳಿಗೆ ಈ ತಂಡದಿಂದ ಕೊಡುಗೆ ನೀಡಲ್ಪಟ್ಟಿದ್ದು, ಇದೀಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಕಾನಕ್ಕೆ ರೂಪಾಯಿ 15 ಸಾವಿರ ಮೌಲ್ಯದ ಕ್ರೀಡಾ ಸಾಮಾಗ್ರಿಗಳ ಕೊಡುಗೆಯನ್ನು ನೀಡಿ ಗ್ರಾಮೀಣ ಪರಿಸರದ ಶಾಲಾ ಮಕ್ಕಳ ಸಂತಸಕ್ಕೆ ಕಾರಣರಾಗಿದ್ದಾರೆ.

ಪೃಥ್ವಿಕುಮಾರ್ ಟಿ ಇವರು ಜಟಾಯು ತಂಡದ ಕಲಾ ಚಟುವಟಿಕೆ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳ ಪರಿಚಯ ಮಾಡಿಕೊಟ್ಟರು.

ಕೇವಲ ಕಲಾ ಪ್ರದರ್ಶನ ಮಾತ್ರವಲ್ಲದೆ, ಸಾಮಾಜಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಜಟಾಯು ತಂಡವು ಸರಕಾರಿ ಶಾಲೆಗಳಿಗೆ ತಮ್ಮಿಂದಾಗುವ ಕೊಡುಗೆಯನ್ನು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಜಟಾಯು ತಂಡದ ಪೃಥ್ವಿ ಕುಮಾರ್ ಟಿ,ಶ್ರೀವತ್ಸ, ಲಿಖಿತ್, ಅಖಿಲ್, ಆದರ್ಶ್, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಗುರುಪ್ರಸಾದ್ ಎಡಮಲೆ, ಉಪಾಧ್ಯಕ್ಷರು ಸಂಧ್ಯಾ, ಮುಖ್ಯ ಶಿಕ್ಷಕಿ ಪ್ರಮೀಳಾ,ಮತ್ತು ಅತಿಥಿ ಶಿಕ್ಷಕರಾದ ದೀಪ್ತಿ, ಚೈತ್ರ ಇವರು ಉಪಸ್ಥಿತರಿದ್ದರು.