ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಎಡೆಸ್ನಾನ ನಡೆಯಿತು.
ಇಂದು 78 ಜನ ಭಕ್ತರು ಎಡೆಸ್ನಾನ ನಡೆಸಿದರು. ಆರಂಭದಲ್ಲಿ ಅನ್ನ ಪ್ರಸಾದವನ್ನು ದೇವಸ್ಥಾನದ ಹೊರಾಂಗಣ ಎಲೆಯಲ್ಲಿ ಅಲ್ಲಲ್ಲಿ ಬಡಿಸಲಾಗುತ್ತದೆ. ಬಳಿಕ ದೇವಸ್ಥಾನ ಗೋವುಗಳು ಹೊರಂಗಾಣದಲ್ಲಿ ಬಂದು ಅನ್ನ ಪ್ರಸಾದ ಸೇವಿಸುವ ಸಂಪ್ರದಾಯ ಮಾಡಲಾಗುತ್ತದೆ. ಚೌತಿ, ಪಂಚಮಿ, ಷಷ್ಠಿ ದಿನಗಳಂದು ಎಡೆಸ್ನಾನ ಸೇವೆ ನಡೆಸುವ ಸಂಪ್ರದಾಯ ಇದೆ. ದೇವಸ್ಥಾನ ಅಧಿಕಾರಿಗಳು, ಸಿಬ್ಬಂದಿಗಳು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಪೋಟೋ: ಪ್ರತಿರೂಪ ಸುಬ್ರಹ್ಮಣ್ಯ