ದಿ. ಪಾರ್ವತಿ ವಸಂತ ಕುಮಾರ್ ಕೋಟೆಯವರಿಗೆ ಶ್ರದ್ಧಾಂಜಲಿ ಸಭೆ

0

ನ. 23ರಂದು ನಿಧನರಾದ ಹಿರಿಯ ಸಹಕಾರಿ ದಿ. ಕೋಟೆ ವಸಂತ ಕುಮಾರರ ಪತ್ನಿ ಶ್ರೀಮತಿ ಪಾರ್ವತಿ ವಸಂತ ಕುಮಾರ್ ಕೋಟೆಯವರಿಗೆ ಶ್ರದ್ಧಾಂಜಲಿ ಸಭೆ ಡಿ. 5ರಂದು ಮೃತರ ಸ್ವಗೃಹ ಕೋಟೆ ಕಲಾನಿಲಯದಲ್ಲಿ ನಡೆಯಿತು.

ಮೃತರ ಅಳಿಯ ಗಣಪಯ್ಯ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ಚೂಂತಾರು, ಉದ್ಯಮಿ ವಸಂತ ಶೆಟ್ಟಿ ಬೆಳ್ಳಾರೆ, ಪತ್ರಕರ್ತ ಹರೀಶ್ ಮೋಟುಕಾನ, ಮೃತರ ಸಹೋದರ ವಾರಣಾಶಿ ಗೋಪಾಲಕೃಷ್ಣ, ಮೃತರ ಪುತ್ರ ಶಶಿಧರ್ ಕೋಟೆ ನುಡಿನಮನಗಳನ್ನು ಸಲ್ಲಿಸಿದರು. ರಮೇಶ್ ಕೋಟೆ ವಂದಿಸಿದರು.

ಮೃತರ ಪುತ್ರ ಉದ್ಯಮಿ, ಕೋಟೆ ಫೌಂಡೇಶನ್ ನ ಸಂಸ್ಥಾಪಕ ರಘುರಾಮ ಕೋಟೆ, ಪುತ್ರಿ ಶ್ರೀಮತಿ ಶಶಿಕಲಾ ಗಣಪಯ್ಯ ಕೆ, ಸೊಸೆಯಂದಿರಾದ ಶ್ರೀಮತಿ ಸೀತಾ ಶಶಿಧರ್ ಕೋಟೆ, ಶ್ರೀಮತಿ ಅರ್ಚನಾ ರಘುರಾಮ್ ಕೋಟೆ, ಮೊಮ್ಮಕ್ಕಳು, ಕೋಟೆಯವರ ಅಭಿಮಾನಿಗಳು, ಕುಟುಂಬಸ್ಥರು, ಬಂಧು ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.