ಕರಿಕ್ಕಳ ಬಳಿ ಕಾರುಗಳ ಮಧ್ಯೆ ಅಪಘಾತ, ಜಖಂ

0


ಕಾರುಗಳ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿ, ಕಾರುಗಳು ಜಖಂಗೊಂಡ ಘಟನೆ ಇಂದು ಬೆಳಿಗ್ಗೆ ಪಂಜದ ಕರಿಕ್ಕಳ ಬಳಿ ಸಂಭವಿಸಿದೆ.

ಪಂಜ ಕಡೆ ತೆರಳುತ್ತಿದ್ದ ಓಮ್ನಿ ಕಾರು ಹಾಗೂ ಎದುರಿನಿಂದ ಬಂದ ಕಾರು ಪರಸ್ಪರ ಡಿಕ್ಕಿಯಾಯಿತು. ಕಾರಿನ ಹಿಂಬದಿಯಿಂದ ಬಂದ ಇನ್ನೊಂದು ಕಾರು ಎದುರಿನ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆ ಕಾರು ಕೂಡಾ ಜಖಂಗೊಂಡಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.