ಕಲ್ಚೆರ್ಪೆ ರಸ್ತೆ ಬದಿ ನಿಲ್ಲಿಸಿದ ಲಾರಿಯ ಚಕ್ರ ಕದ್ದೊಯ್ದ ಕಳ್ಳರು- ಪೋಲಿಸ್ ದೂರು

0

ಪೆರಾಜೆ ಕಲ್ಚೆರ್ಪೆ ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿಯ ಚಕ್ರವನ್ನು ಬಿಚ್ಚಿ ಕಳ್ಳತನ ಮಾಡಿರುವ ಘಟನೆ ಡಿ.3 ರಂದು ವರದಿಯಾಗಿದೆ.
ಕೇರಳದ ನೋಂದಣಿ ಸಂಖ್ಯೆ ಹೊಂದಿರುವ ಲಾರಿಯಾಗಿದ್ದು
ಕುಂಬಳಚೇರಿಯಲ್ಲಿ ಮರದ ವ್ಯಾಪಾರಕ್ಕೆಂದು ಬಂದವರ ಲಾರಿ ಇದಾಗಿದ್ದು ಕಲ್ಚೆರ್ಪೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು ರಾತ್ರಿ ಸಮಯದಲ್ಲಿ ಯಾರೋ ಕಿಡಿಗೇಡಿ ಕಳ್ಳರು ಹೊಂಚು ಹಾಕಿ ಲಾರಿಯ ಹಿಂಬದಿಯ 2 ಚಕ್ರವನ್ನು ಬಿಚ್ಚಿ ಕದ್ದೊಯ್ದಿದ್ದಾರೆ. ಸ್ಟೇಪಿನ್ ಟಯರ್ ನ್ನು ಹಾಗೆ ಬಿಟ್ಟು ಹೋಗಿದ್ದಾರೆ.


ಸ್ಥಳೀಯ ಅಂಗಡಿಯಲ್ಲಿ ಇರುವ ಸಿ.ಸಿ.ಟಿವಿ ಫೂಟೇಜ್ ಪರಿಶೀಲಿಸಿದಾಗ ಮುಂಜಾನೆ ಸಮಯದಲ್ಲಿ ಬೇರೊಂದು ಲಾರಿ ಬಂದು ಇದೇ ಲಾರಿ ಪಕ್ಕದಲ್ಲಿ ನಿಲ್ಲಿಸಿದ್ದ ದೃಶ್ಯ ಕಂಡು ಬಂದಿದೆ ಎಂದು ಸ್ಥಳೀಯರು ತಿಳಿಸಿರುತ್ತಾರೆ.
ಈ ಬಗ್ಗೆ ಸುಳ್ಯ ಪೋಲಿಸರಿಗೆ ದೂರು ನೀಡಲಾಗಿದ್ದು ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.