ಮೇನಾಲದಲ್ಲಿ ಡಾ||ಅಂಬೇಡ್ಕರ್ ಮಹಾಪರಿನಿಬ್ಬಾಣ ಕಾರ್ಯಕ್ರಮ ಹಾಗೂ ಭೀಮ ಸಂಕಲ್ಪ ದಿನ

0

ಸುಳ್ಯ: ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ, ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ಮಹಾಪರಿನಿಬ್ಬಾಣ ಕಾರ್ಯಕ್ರಮ ಡಿ.6 ರಂದು ಅಜ್ಜಾವರ ಮೇನಾಲ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಭಾರತ ಮುಕ್ತಿ ಮೋರ್ಚಾ ಕರ್ನಾಟಕದ ಅಧ್ಯಕ್ಷರಾದ ಅಡ್ವಕೇಟ್ ನವೀನ್ ಮಹರಾಜ್ ಕೋಲಾರ ಉದ್ಘಾಟಿಸಿ ಮಹಿಳೆಯರು ಮತ್ತು ಅಂಬೇಡ್ಕರ್ ಕಾನೂನು ವಿಷಯದ ಮಾತನಾಡಿದರು.


ಬೆಂಗಳೂರಿನ ಸಾಮಾಜಿಕ ಹೋರಾಟಗಾರ ಸ್ಯಾಮ್ ಅಡಿಯೋಸ್ ನ ಸಂಸ್ಥಾಪಕರಾದ ಸಿದ್ದಾರ್ಥ ಅನಂದ್ ಮಾಲೂರು ರವರು ಅಂಬೇಡ್ಕರ್ ಕೊನೆಯದಿನಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಕಿ ಕಾಟಿಪಳ್ಳ ವಹಿಸಿದರು.

ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸಂಸ್ಥಾಪಕರಾದ ಶೇಷಪ್ಪ ಬೆದ್ರಕಾಡು ಭಾವಚಿತ್ರಕ್ಕೆ ದೀಪ ಬೆಳಗಿಸಿದರು.
ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಂಬೇಡ್ಕರ್ ಭಾವಚಿತ್ರಕ್ಕೆ ಹಾರರ್ಪಣೆ ಮಾಡಿದರು.

ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ,ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘ ಸುಳ್ಯ ಶಾಖೆ ಅಧ್ಯಕ್ಷ ಕರುಣಾಕರ ಪಿ ಆರ್ ಪಲ್ಲತ್ತಡ್ಕ,ಅದಿ ದ್ರಾವಿಡ ಯುವ ವೇದಿಕೆ ಸುಳ್ಯ ತಾಲೂಕು ಘಟಕ ಅಧ್ಯಕ್ಷ ಮೊನಪ್ಪ ಶಿವಾಜಿ ಜೆಡಿಎಸ್ ಎಸ್ ಸಿ ಘಟಕ ಅದ್ಯಕ್ಷ ಎನ್ ಬಿ ಚೋಮ ನಾವೂರು, ಸುಳ್ಯ ತಾಲೂಕು ಬಿಜೆಪಿ ಎಸ್ ಸಿ ಘಟಕ ಅಧ್ಯಕ್ಷ ವಿಜಯ ಆಲಡ್ಕ,
ಕಾರ್ಯಕ್ರಮದಲ್ಲಿ ರಾಘವ ಕಳಾರ ಕಡಬ, ಮುಖ್ತಾರ್ ಹಿಮಮಿ ಸಖಾಫಿ ಬಾಡೇಲು,ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಅರಣ್ಯಾಧಿಕಾರಿ ಮನೋಹರ ಪಲ್ಲತ್ತಡ್ಕ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಂಜಿತ್ ರೈ ಮೇನಾಲ, ಮೇನಾಲ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶೌಕತ್ ಮೇನಾಲ,ಮೋನಪ್ಪ ಶಿವಾಜಿ ನಗರ ಮಂಡೆಕೋಲು
ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಲೂಕು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಬೂಡುಮಕ್ಕಿ ಸ್ವಾಗತಿಸಿ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕೆ ಪಲ್ಲತ್ತಡ್ಕ ಪ್ರಸ್ತಾವಿಕ ಮಾತನಾಡಿದರು.
ರಾಘವ ಅಜ್ಜಾವರ ಅಂಬೇಡ್ಕರ್ ಗೀತೆಯನ್ನು ಹಾಡಿದರು.
ಬಾಲಕೃಷ್ಣ ಡಿ.ಪಿ ದೊಡ್ಡೆರಿ‌ಯವರು ದನ್ಯವಾದ ಸಮರ್ಪಣೆ ಮಾಡಿದರು