ಪ್ರಸಿದ್ಧ ಗಾಯಕ ಹಾಗೂ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಸ್ವಾಮೀಜಿಯಾಗಿ ಹಲವು ದಶಕ ಮಾರ್ಗದರ್ಶನ ಮಾಡಿದ್ದ ಡಾ.ವಿದ್ಯಾಭೂಷಣರ ಮಾತೃಶ್ರೀಯವರಾದ ಶ್ರೀಮತಿ ಮಂದಾಕಿನಿ ಅಮ್ಮರವರು ಇಂದು ಬೆಳಿಗ್ಗೆ ಮೈಸೂರಿನಲ್ಲಿರುವ ಎರಡನೇ ಮಗನ ಮನೆಯಲ್ಲಿ ದೈವಾಧೀನರಾದರು.
ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ಪುತ್ರರಾದ ಡಾ.ವಿದ್ಯಾಭೂಷಣ ಬೆಂಗಳೂರು, ವೇಣುಗೋಪಾಲ ಆಚಾರ್ ಮೈಸೂರು, ಮುರಳೀಧರ ಆಚಾರ್ ಬೆಂಗಳೂರು, ಪುತ್ರಿಯರಾದ ಶ್ರೀಮತಿ ವಾರಿಜ, ಶ್ರೀಮತಿ ಚಂದ್ರಿಕಾ, ಶ್ರೀಮತಿ ನಾಗಮಣಿ, ಶ್ರೀಮತಿ ಗಾಯತ್ರಿ ಹಾಗೂ ಮನೆಯವರನ್ನು ಅಗಲಿದ್ದಾರೆ.
ದಿ. ಗೋವಿಂದ ಆಚಾರ್ಯರ ಧರ್ಮಪತ್ನಿಯಾಗಿದ್ದ ಮಂದಾಕಿನಿ ಅಮ್ಮ ಸುಬ್ರಮಣ್ಯ ಮಠದಲ್ಲಿ ಇರುವಷ್ಟು ಕಾಲ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾಗಿದ್ದರು.