ಶಾಲಾ ಸ್ಥಾಪಕ ದಾನಿಗಳ ಸ್ಮರಣೆ ಮತ್ತು ಸನ್ಮಾನ, ಗೌರವಾರ್ಪಣೆ
ಊರಿನ ಕೊಡುಗೈದಾನಿಗಳಿಂದ ಶಾಲೆಗಳ ಬೆಳವಣಿಗೆ : ಸದಾನಂದ ಮಾವಜಿ
ದ.ಕ.ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಸುಳ್ಯ ,ಸರಕಾರಿ ಪದವಿಪೂರ್ವ ಕಾಲೇಜು ಐವರ್ನಾಡು ಇಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ,ವಾರ್ಷಿಕೋತ್ಸವ ,ಶಾಲಾ ಸ್ಥಾಪಕ ದಾನಿಗಳ ಸ್ಮರಣೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮವು ಡಿ.07 ರಂದು ನಡೆಯಿತು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಹಲವಾರು ಜನ ಕೊಡುಗೈದಾನಿಗಳಿಂದ ಶಾಲೆ ಬೆಳೆದು ನಿಂತಿದೆ.ಸರಕಾರದ ಅನುದಾನ ಅನುಷ್ಟಾನಗೊಳ್ಳಲು ಊರವರ ಸಹಕಾರ ಅತೀ ಅಗತ್ಯ.
ಈ ನಿಟ್ಟಿನಲ್ಲಿ ಐವರ್ನಾಡಿನಲ್ಲಿ ಉತ್ತಮವಾಗಿ ಕಾರ್ಯಕ್ರಮಗಳು ನಡೆಯುತ್ತಿದೆ.ಇವತ್ತು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ವೇದಿಕೆ ಕಲ್ಪಿಸಿದಂತಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು.
ಸಭಾ ಕಾರ್ಯಕ್ರಮದ ಮೊದಲು
ಸರಕಾರಿ ಅನುದಾನ ಹಾಗೂ ಊರವರ ಕೊಡುಗೆಯಿಂದ ನಿರ್ಮಾಣವಾದ ರಂಗಮಂದಿರ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರು ತೆಂಗಿನಕಾಯಿ ಒಡೆಯುವುದರ ಮೂಲಕ ಉದ್ಘಾಟಿಸಿದರು. ಶಿವರಾಮರಾವ್ ಮತ್ತು ಶ್ರೀಮತಿ ಜಯಲಕ್ಷ್ಮೀ ಉದ್ದಂಪಾಡಿ ಇವರ ಸ್ಮರಣಾರ್ಥ ಹರೀಶ್ ರಾವ್ ಉದ್ದಂಪಾಡಿ ಮತ್ತು ಮನೆಯವರ ಸೇವೆಯಾಗಿ ನಿರ್ಮಾಣವಾದ ಅಕ್ಷಯ ಭೋಜನ ಶಾಲೆಯನ್ನು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್ . ಮನ್ಮಥರವರು ಉದ್ಘಾಟಿಸಿದರು.
ಹರೀಶ್ ರಾವ್ ಉದ್ದಂಪಾಡಿ ಮತ್ತು ಮನೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಎಂ.ಎಸ್.ಕುಶಾಲಪ್ಪ ಗೌಡ ಮಡ್ತಿಲ ಹಾಗೂ ಸಹೋದರರ ಸೇವೆಯಾಗಿ ನಿರ್ಮಾಣವಾದ ಧ್ವಜಸ್ತಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ರವರು ಉದ್ಘಾಟಿಸಿಸಿದರು.
,ಎನ್.ಎಂ.ಬಾಲಕೃಷ್ಣ ಗೌಡ ಪಾಲೆಪ್ಪಾಡಿ ಇವರ ಸ್ಮರಣಾರ್ಥ ಶ್ರೀಮತಿ ಜ್ಯೊತ್ಸ್ನಾ ಪಾಲೆಪ್ಪಾಡಿ ಇವರ ಸೇವೆಯಾಗಿ ನೀಡಿದ ಕೈತೊಳೆಯುವ ಬೇಸಿನ್ ವ್ಯವಸ್ಥೆ ಯನ್ನು ಕೆ.ವಿ.ಜಿ ಐಟಿಐ ಉಪಪ್ರಾಂಶುಪಾಲರಾದ ದಿನೇಶ್ ಮಡ್ತಿಲರವರು ಉದ್ಘಾಟಿಸಿದರು.
ಸರಕಾರದ ಅನುದಾನದಿಂದ ನಿರ್ಮಾಣವಾದ ಕಾಲೇಜು ವಿಭಾಗದ ಶೌಚಾಲಯವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು.ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಸನ್ಮಾನ
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಹರೀಶ್ ರಾವ್ ಉದ್ದಂಪಾಡಿ ಹಾಗೂ ಮನೆಯವರಿಗೆ ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
1994 ರಲ್ಲಿ ಸ.ಪ್ರೌ.ಶಾಲೆ ಐವರ್ನಾಡು ಇದರ ಪ್ರಾರಂಭಕ್ಕೆ ಕಾರಣಕರ್ತರಾದ ರೂ.5,000 ಕ್ಕಿಂತ ಮೇಲ್ಪಟ್ಟು ದೇಣಿಗೆ ನೀಡಿದ ಹಲವು ಮಂದಿ ಸ್ಥಾಪಕ ದಾನಿಗಳಿಗೆ ಗೌರವಾರ್ಪಣೆ ನಡೆಯಿತು.ಕಾಮಗಾರಿ ನಡೆಯಲು ಸಹಕರಿಸಿದ ಎಲ್ಲರನ್ನು ಗೌರವಿಸಲಾಯಿತು.
ಶಾಲಾ ಶಿಕ್ಷಕರನ್ನು,ಬಿಸಿಯೂಟ ಅಡುಗೆಯರನ್ನು ,ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಇಸಾಕ್ ಸ್ವಾಗತಿಸಿ,ವಿದ್ಯಾರ್ಥಿಗಳು ಪ್ರಾರ್ಥಿಸಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿಶನ್ ಜಬಳೆ ಪ್ರಾಸ್ತಾವಿಕ ಮಾತನಾಡಿದರು.
ಸುಬ್ರಹ್ಮಣ್ಯ ಬಾಂಜಿಕೋಡಿ, ಮುರಳಿ ಪಾಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿ,
ಶಾಲಾ ಶಿಕ್ಷಕ ನಾರಾಯಣರವರು ವಂದಿಸಿದರು.
ವೇದಿಕೆಯಲ್ಲಿ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಮನ್ಮಥ,ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ, ಎಂ.ಬಿ.ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಎಂ.ಬಿ.ಸದಾಶಿವ, ಪಿ.ಎಂ.ಪೋಷಣ್ ಸಹಾಯಕ ನಿರ್ದೇಶಕರಾದ ವೀಣಾ ಎಂ.ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಉದ್ಯಮಿಗಳಾದ ಹರೀಶ್ ರಾವ್ ಉದ್ದಂಪಾಡಿ,ಶಾಲಾ ಹಿರಿಯ ಅಧ್ಯಾಪಕ ಸೂಫಿ ಪಿ.ಐ, ಕೆ.ವಿ.ಜಿ.ಐಟಿಐ ಉಪಪ್ರಾಂಶುಪಾಲ ದಿನೇಶ್ ಮಡ್ತಿಲ, ದಾನಿಗಳಾದ ಕುಶಾಲಪ್ಪ ಗೌಡ ಮಡ್ತಿಲ, ಗ್ರಾ.ಪಂ.ಪಿಡಿಒ ಶ್ಯಾಮ್ ಪ್ರಸಾದ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ದಯಾನಂದ ಕಟ್ಟತ್ತಾರು,ಭೋಜನ ಶಾಲಾ ನಿರ್ಮಾಣ ಸಮಿತಿ ಅಧ್ಯಕ್ಷೆ ಶ್ರೀಮತಿ ರೇಖಾ ಉದ್ದಂಪಾಡಿ,ರಂಗಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನಾಗಪ್ಪ ಪಾಲೆಪ್ಪಾಡಿ,ಕಾರ್ಯದರ್ಶಿ ಬಾಲಕೃಷ್ಣ ಮಡ್ತಿಲ ಉಪಸ್ಥಿತರಿದ್ದರು.
ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಸಂಜೆ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಜೃತಿಕ ಕಾರ್ಯಕ್ರಮ ನಡೆಯಿತು.
ಬಳಿಕ ಪಿಯರ್ಲ್ ಡ್ಯಾನ್ಸ್ ಕ್ರೂ ತಂಡ ಮಂಗಳೂರು ಇವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಪ್ರಾಯೋಜಕತ್ವದಲ್ಲಿ ನಡೆಯಿತು.
ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ಮನರಂಜಿಸಿತ್ತು.
ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದು ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.