ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಮೇರಿಕಾ ನಿಯೋಜಿತ ಅಧ್ಯಕ್ಷ ಡೊನಾನ್ಡ್ ಟ್ರಂಪ್ ಅವರ ವ್ಯವಹಾರ ಪಾಲುದಾರ (ಬಿಸ್ನೆಸ್ ಪಾರ್ಟ್ನರ್) ಹೈದರಾಬಾದ್ ಮೂಲದ ಶಶಿಭೂಷನ್ ಅವರು ಡಿ.7 ರಂದು ಭೇಟಿ ನೀಡಿದರು.
ಶಶಿಭೂಷನ್ ಅವರು ಶ್ರೀ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.
ಅಮೇರಿಕಾದಲ್ಲಿ ನೆಲೆಸಿರೋ ಇವರು ಹೈದರಾಬಾದ್ ಮೂಲದ ಶಶಿಭೂಷಣ್ , ಡೊನಾಲ್ಡ್ ಟ್ರಂಪ್ ಬಿಸ್ನೆಸ್ ಪಾರ್ಟ್ನರ್ ಆಗಿದ್ದು, ಅಮೇರಿಕಾದಲ್ಲಿ 500 ಎಕರೆ ಜಾಗದಲ್ಲಿ 3000 ಕೋಟಿ ರೂಪಾಯಿ ವೆಚ್ಚದಲ್ಲಿ ಶಂಕರಾಚಾರ್ಯರ ಆಧ್ಯಾತ್ಮಿಕ ಕೇಂದ್ರ ಮತ್ತು ದೇವಸ್ಥಾನ ನಿರ್ಮಿಸುತ್ತಿದ್ದಾರೆ. ಅಮೇರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ ‘ಎ’ ಪ್ಯಾಕ್ ನ್ನು ಶಶಿಭೂಷನ್ ಮುನ್ನೆಡಿಸಿದ್ದರು. ಟ್ರಂಪ್ ಗೆಲುವಿನಲ್ಲೂ ಎ ಪ್ಯಾಕ್ ಸಾಕಷ್ಟು ಶ್ರಮವಹಿಸಿದೆ. ಇತಿಹಾಸ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದು ಪುಳಕಿತನಾಗಿದ್ದೇನೆ. ಸನಾತನ ಧರ್ಮ ಉಳಿಸಲು ಅಮೇರಿಕಾದಲ್ಲಿ 500 ಎಕರೆ ಜಾಗದಲ್ಲಿ ಸನಾತನಾ ಧಾರ್ಮಿಕ ಕೇಂದ್ರ ಕಟ್ಟಿಸುತ್ತಿದ್ದೇವೆ. ಟ್ರಂಪ್ ಮೋದಿಗೂ ಪ್ರಿಯರಾಗಿದ್ದಾರೆ.
ಅವರಿಂದ ಸನಾತನ ಧರ್ಮಕ್ಕೂ ಒಳ್ಳೆಯದಾಗಲಿದೆ ಎಂದ ಶಶಿಭೂಷಣ್ ಪ್ರತಿಕ್ರಿಯಿಸಿದ್ದಾರೆ.
ಆಕಾಶ್ ನಾಯರ್ ಕೆರೆ, ಕಾರ್ತಿಕ್ ರೈ ಮತ್ತಿತರರು ಉಪಸ್ಥಿತರಿದ್ದರು.