ನಿವೃತ್ತ ಯೋಧರಿಗೆ ಗೌರವ ಸನ್ಮಾನ
ಅರಂಬೂರು ಸಾರ್ವಜನಿಕ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮತ್ತು ಅಯ್ಯಪ್ಪ ದೀಪೋತ್ಸವ ಸಮಿತಿ ಆಶ್ರಯದಲ್ಲಿ ಡಿ.ನಾರಾಯಣ ಗುರುಸ್ವಾಮಿ ದೊಡ್ಡೇರಿ ಮತ್ತು ಯಂ.ಈಶ್ವರ ಗುರುಸ್ವಾಮಿ ಮಜಿಗುಂಡಿ ಇವರ ನೇತೃತ್ವದಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ 15 ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವವು ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿ ಡಿ.7 ರಂದು ಜರುಗಿತು.
ಅರ್ಚಕರ ನೇತೃತ್ವದಲ್ಲಿ
ಪೂರ್ವಾಹ್ನ ಗಣಪತಿ ಹವನವಾಗಿ ದೀಪಾರಾಧನೆಯೊಂದಿಗೆ ಉಷಾ ಪೂಜೆಯು ನಡೆಯಿತು.
ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಸಂಜೆ ಅಯ್ಯಪ್ಪ ವೃತಧಾರಿಗಳ ಪಾಲ್ ಕೊಂಬು ಮೆರವಣಿಗೆಯು ಚೆಂಡೆ ವಾದ್ಯ ಘೋಷಗಳೊಂದಿಗೆ ಬಾಲಕ ಬಾಲಕಿಯರ ದೀಪಾರಾಧನೆಯೊಂದಿಗೆ ಸಿಡಿ ಮದ್ದಿನ ಪ್ರದರ್ಶನ ದೊಂದಿಗೆ ಸರಳಿಕುಂಜ ಗಣೇಶ್ ಇಂಡಸ್ಟ್ರೀಸ್ ಬಳಿಯಿಂದ ಹೊರಟು ಭಜನಾ ಮಂದಿರದ ತನಕ ಸಾಗಿ ಬಂತು.
ಬಳಿಕ ಸ್ಥಳೀಯ ಭಜಕರಿಂದ ನೃತ್ಯ ಭಜನೆಯು ನಡೆಯಿತು. ರಾತ್ರಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಬಳಿಕಗುರುಸ್ವಾಮಿಗಳವರ ನೇತೃತ್ವದಲ್ಲಿ ಅಯ್ಯಪ್ಪ ವೃತಧಾರಿಗಳಿಂದ ಮೇಲೇರಿಗೆ ಅಗ್ನಿ ಸ್ಪರ್ಶವಾಗಿ ವಿಶೇಷವಾಗಿ ಅಪ್ಪ ಸೇವೆಯು ನಡೆಯಿತು. ಮರುದಿನ ಪ್ರಾತ:ಕಾಲ ಅಯ್ಯಪ್ಪ ವೃತಧಾರಿಗಳಿಂದ ಅಗ್ನಿ ಸೇವೆಯು ನಡೆದು ಮಹಾಮಂಗಳಾರತಿಯಾಗಿದೀಪವಿಸರ್ಜನೆಯಾಯಿತು.
ನಿವೃತ್ತ ಯೋಧರಿಗೆ ಸನ್ಮಾನ ಸಮಾರಂಭ:
ರಾತ್ರಿ ಅಯ್ಯಪ್ಪ ಸೇವಾ ಸಮಿತಿ ಕಾರ್ಯಾಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ
ಭಾರತೀಯ ಸೇನೆಯಲ್ಲಿ ಸುಬೇದಾರ್ ಮೇಜರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಯೋಧ ಮೋಹನ್ ಲಾಲ್ ಪಡ್ಪು ರವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಯಿ ಶ್ರೀಮತಿ ಪದ್ಮಾವತಿ ಪಡ್ಪು, ಪತ್ನಿ ಶ್ರೀಮತಿ ಪವಿತ್ರ ಪಡ್ಪು ರವರು ಜತೆಯಲ್ಲಿದ್ದರು. ವೇದಿಕೆಯಲ್ಲಿ ಸಮಿತಿ
ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಭಜನಾ ಮಂದಿರದ ಅಧ್ಯಕ್ಷ ರತ್ನಾಕರ ರೈ ಅರಂಬೂರು, ಗುರುಸ್ವಾಮಿಗಳಾದ ನಾರಾಯಣ ದೊಡ್ಡೇರಿ, ಈಶ್ವರ ಮೂಲ್ಯ ಮಜಿಗುಂಡಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪುಷ್ಪರಾಜ್ ಕುಲಾಲ್ ಸನ್ಮಾನ ಪತ್ರ ವಾಚಿಸಿದರು.
ವಿಜೇತ್ ಸುವರ್ಣ ಕಮಿಲಡ್ಕ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.
ಬಳಿಕ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಕಳವಾರು ಬಾಳ ಮಂಗಳೂರು ಕಲಾವಿದರಿಂದ
ಕಾರ್ನಿಕದ ಸತ್ಯೊದ ಸ್ವಾಮಿ ಕೊರಗಜ್ಜ ಎಂಬ
ತುಳು ಯಕ್ಷಗಾನ
ಬಯಲಾಟ ಪ್ರದರ್ಶನವಾಯಿತು.
ಸಂಜೆ ಸುರಿದ ಮಳೆಯನ್ನು ಲೆಕ್ಕಿಸದೆ ಭಕ್ತಾದಿಗಳು
ಪಾಲ್ ಕೊಂಬು ಮೆರವಣಿಗೆಯಲ್ಲಿ ಸಾಗಿ ಬಂದರು. ತಾಲೂಕಿನ ವಿವಿಧ ಕಡೆಗಳಿಂದ ಅಯ್ಯಪ್ಪ ವೃತಧಾರಿಗಳು ಆಗಮಿಸಿ ದೀಪೋತ್ಸವದಲ್ಲಿ ಪಾಲ್ಗೊಂಡರು.