ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಡಿ. 06 ರಿಂದ ಡಿ. 10ರ ತನಕ ವಿವಿಧ ವೈದಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಡಿ. 06ರಂದು ರಾತ್ರಿ ಪಂಚಮಿ ಕಾರ್ಯಕ್ರಮ, ಸಂಜೆ ಹೊರೆಕಾಣಿಕೆ ಸಮರ್ಪಣೆ ನಡೆಯತು.
ಡಿ. 07 ರಂದು ಷಷ್ಠಿ ಮಹೋತ್ಸವದಂದು ಬೆಳಿಗ್ಗೆಯಿಂದ ವಿವಿಧ ವೈದಿಕ ಕಾರ್ಯಕ್ರಮಗಳು ಸಂಜೆ ತಾಯಂಬಕಂ, ನೇರಳತ್ತಾಯ ದೈವದ ಭಂಡಾರ ತೆಗೆದು, ಮಹಾಪೂಜೆ, ಬಲಿ ಉತ್ಸವ, ಪ್ರಸಾದ ವಿತರಣೆ ಬಳಿಕ ನೇರಳತ್ತಾಯ ಮತ್ತು ಪರಿವಾರ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ ನಡೆಯಿತು ಇಂದು ಬೆಳಿಗ್ಗೆ ರಕ್ತೇಶ್ವರಿ ದೈವದ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ರಂಗಪೂಜೆ ಬಳಿಕ ರಕ್ತೇಶ್ವರಿ ಮತ್ತು ಪರಿವಾರ ದೈವಗಳಿಗಳ ನೇಮೋತ್ಸವ ನಡೆಯಲಿದೆ. ಡಿ. 09 ರಂದು ರಾತ್ರಿ ಮಹಾಪೂಜೆ, ಉಳ್ಳಾಕುಳು, ಚಾಮುಂಡಿ ದೈವಗಳಿಗಳ ನೇಮೋತ್ಸವ, ಡಿ. 10ರಂದು ಬೆಳಿಗ್ಗೆ ಚಾಮುಂಡಿ ದೈವ, ಗಣಗಳ ನೇಮೋತ್ಸವ ನಡೆದು, ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಲಿದೆ.
ಸಾಂಸ್ಕೃತಿಕ ಮತ್ತು ಭಜನಾ ಕಾರ್ಯಕ್ರಮ:
ಡಿ. 07ರಂದು ಪೂರ್ವಾಹ್ನ ಶ್ರೀ ಸತ್ಯಸಾಯಿ ಸೇವಾ ಸಮಿತಿ ಚೊಕ್ಕಾಡಿ ಇವರಿಂದ ಭಜನಾ ಕಾರ್ಯಕ್ರಮದ ಬಳಿಕ ಸಾನ್ವಿ ತಂಟೆಪ್ಪಾಡಿಯವರಿಂದ ಯೋಗ ಪ್ರದರ್ಶನ, ರಾತ್ರಿ ಭಜನಾ ಶ್ರೀ ಮಹಾವಿಷ್ಣು ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಇಂದು ಮಧ್ಯಾಹ್ನ ಗೀತ ಜ್ಞಾನ ಯಜ್ಞ ಬಾಳಿಲ ಘಟಕ ವತಿಯಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ, ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು. ಡಿ. 09ರಂದು ರಾತ್ರಿ 7.00ರಿಂದ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.