ಕೊಯನಾಡು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಚಾಲಕ ಸೇರಿ ಇಬ್ಬರಿಗೆ ಗಾಯ

0

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಢಿಕ್ಕಿಹೊಡೆದು ಪಲ್ಟಿಯಾದ ಪರಿಣಾಮವಾಗಿ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಕೊಡಗು ಸಂಪಾಜೆ ಗ್ರಾಮದ ಕೊಯನಾಡಿನಲ್ಲಿ ಡಿ.8ರಂದು ಸಂಜೆ ಸಂಭವಿಸಿದೆ.

ಮಡಿಕೇರಿ ಮೂಲದ ಇಬ್ಬರು ಪ್ರಯಾಣಿಸುತ್ತಿದ್ದ ವ್ಯಾಗನಾರ್ ಕಾರು ಕೊಯನಾಡಿಗೆ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಚರಂಡಿಗೆ ಇಳಿದು, ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಯಿತೆನ್ನಲಾಗಿದೆ. ಪರಿಣಾಮವಾಗಿ ಚಾಲಕ ಹಾಗೂ ಮುಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯರ ಸಹಕಾರದಿಂದ ಸುಳ್ಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರೆಂದು ತಿಳಿದುಬಂದಿದೆ. ಬಳಿಕ ಪಲ್ಟಿಯಾದ ಕಾರನ್ನು ಕೊಯನಾಡಿನ ಗ್ರಾಮಸ್ಥರು ಮೇಲೆತ್ತಿದರೆಂದು ತಿಳಿದುಬಂದಿದೆ.