ಪಂಜ:ಬಿಳಿಮಲೆ ದಿ. ಶೇಷಪ್ಪ ಗೌಡರ ಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ

0

ಬಿಳಿಮಲೆ ದಿ. ಶೇಷಪ್ಪ ಗೌಡರ ಸ್ಮರಣಾರ್ಥ ಅವರ ಮನೆಯವರ ಪ್ರಾಯೋಜಕತ್ವದಲ್ಲಿ ,ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ (ರಿ). ಪಂಜ ಇವರ ಸಹಯೋಗದಲ್ಲಿ ಡಿ.6 ರಂದು ಪಂಜ ದೇವಳದ ಸಮೀಪದ ಶ್ರೀ ಶಾರದಾಂಬಾ ಯಕ್ಷಗಾನ ಕಲಾಕೇಂದ್ರದಲ್ಲಿ ಯಕ್ಷಗಾನ ತಾಳಮದ್ದಳೆ ‘ವಾಲಿ ಮೋಕ್ಷ’ ಪ್ರಸಂಗ ನಡೆಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮತ್ತು ಸಭಾಧ್ಯಕ್ಷತೆ ವಹಿಸಿದ್ದ ಪ್ರೊ. ಪದ್ಮನಾಭ ಗೌಡ ಬಿಳಿಮಲೆ ರವರನ್ನು ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ , ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್,ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು, ರವಿಪ್ರಸಾದ್ ಚೆಮ್ನೂರು, ಶ್ರೀಮತಿ ಶೋಭಾನ ಬಿಳಿಮಲೆ,ಯಕ್ಷಗಾನ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ಪುತ್ಯ ಹಾಗೂ ಪರಮೇಶ್ವರ ಗೌಡ ಬಿಳಿಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಳಮದ್ದಳೆ ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಯೆಪದವು, ಪ್ರಶಾಂತ್ ರೈ ಪಲ್ಲೋಡಿ, ಕು. ರಚನಾ ಚಿದ್ಗಲ್ಲು,ಚೆಂಡೆ ಮದ್ದಳೆ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಗಗನ್ ಪಂಜ
ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಟಾರ್, ಜಬ್ಬಾರ್ ಸಮೋ ಸಂಪಾಜೆ, ಶ್ರೀರಮಣ ಆಚಾರ್ಯ ಕಾರ್ಕಳ, ಡಾ.ಪುರುಷೋತ್ತಮ ಬಿಳಿಮಲೆ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ರಚನಾ ಚಿದ್ಗಲ್ಲು ಪ್ರಾರ್ಥಿಸಿದರು. ಗುರು ಪ್ರಸಾದ್ ತೋಟ ‌ಸ್ವಾಗತಿಸಿದರು ಮತ್ತು ನಿರೂಪಿಸಿದರು. ಪರಮೇಶ್ವರ ಗೌಡ ಬಿಳಿಮಲೆ ವಂದಿಸಿದರು.