ಅಜ್ಜಾವರ ಮೇನಾಲ ದರ್ಗಾ ದಲ್ಲಿ ಮಾಸಿಕ ಸ್ವಲಾತ್ ಮಜ್ಲೀಸ್

0

ಜನವರಿ 17 ರಿಂದ 21 ರವರೆಗೆ ನಡೆಯಲಿರುವ ಉರೂಸ್ ಸಮಾರಂಭದ ಯಶಸ್ವಿಗೆ ವಿಶೇಷ ಪ್ರಾರ್ಥನೆ

ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ದರ್ಗಾದಲ್ಲಿ ವರ್ಷಂಪ್ರತಿ ಆಚರಿಸಿಕ್ಕೊಂಡು ಬರುವ ಉರೂಸ್ ಕಾರ್ಯಕ್ರಮ ಜನವರಿ 17 ರಿಂದ 21 ರವರೆಗೆ ನಡೆಯಲಿದೆ.

ಈ ಕಾರ್ಯಕ್ರಮದ ಯಶಸ್ವಿ ಗೆ ಡಿ. 8 ರಂದು ಮೇನಾಲ ದರ್ಗಾದಲ್ಲಿ ನಡೆದ ಮಾಸಿಕ ಸ್ವಲಾತ್ ಮಜ್ಲೀಸ್ ನಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.


ಸ್ಥಳೀಯ ಮಸೀದಿ ಖತೀಬರಾದ ಹಸೈನಾರ್ ಫೈಝಿರವರು ದುವಾ ನೇತೃತ್ವವನ್ನು ವಹಿಸಿದ್ದರು.
ಈ ಸಂಧರ್ಭದಲ್ಲಿ ಹಿರಿಯರಾದ ಅಬ್ಬಾಸ್ ಹಾಜಿ ಡೆಲ್ಮ,ಆಡಳಿತ ಕಮಿಟಿಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್, ಕೋಶಾಧಿಕಾರಿ ಶರೀಫ್ ರಿಲ್ಯಾಕ್ಸ್, ಸದಸ್ಯರುಗಳಾದ ಖಾದರ್ ಎನ್, ಸಿದ್ದೀಕ್ ಡೆಲ್ಮ,ರಹ್ಮಾನ್, ಹನೀಫ್ ಮುಸ್ಲಿಯಾರ್ ಹಾಗೂ ಜಮಾಅತ್ ಸದಸ್ಯರುಗಳು ಮತ್ತು ಸ್ಥಳೀಯ ಜಮಾಅತ್ ಬಾಂಧವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಿತು.