ಸುಳ್ಯದ ಗಾಂಧಿನಗರ ಪಯಸ್ವಿನಿ ಸರ್ವಿಸ್ ಸ್ಟೇಷನ್ ಹೆಚ್.ಪಿ.ಸಿ.ಎಲ್. ಸಂಸ್ಥೆಯ ಪ್ರತಿಷ್ಟಿತ ಹೆಚ್.ಪಿ. ಕ್ಲಬ್ ಫಸ್ಟ್ ಗೆ ಆಯ್ಕೆಯಾಗಿದೆ.
ಪೆಟ್ರೋಲ್ ಪಂಪ್ ನಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವವರನ್ನು ಹೆಚ್ ಪಿ. ಕ್ಲಬ್ ಫೆಸ್ಟ್ ಗೆ ಆಯ್ಕೆಮಾಡಲಾಗುತ್ತಿದ್ದು
ಸುಳ್ಯ ಮತ್ತು ಪುತ್ತೂರು ತಾಲೂಕಿನಿಂದ ಆಯ್ಕೆಯಾದ ಮೊದಲ ಪ್ರೆಟ್ರೋಲ್ ಪಂಪ್ ಪಯಸ್ವಿನಿ ಸರ್ವಿಸ್ ಸ್ಟೇಷನ್.
ಡಿ.3ರಂದು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಹೆಚ್.ಪಿ.ಸಿ.ಎಲ್. ನ ರೀಜನಲ್ ಮ್ಯಾನೇಜರ್ ರವರು ಪಯಸ್ವಿನಿ ಸರ್ವಿಸ್ ಸ್ಟೇಷನ್ ನ ಪಾಲದಾರರಾದ ಅಬ್ದುಲ್ ಮುಜೀಬ್ ಹಾಗೂ ಮಹಮ್ಮದ್ ಮುಸ್ತಫರಿಗೆ ಪ್ರಮಾಣ ಪತ್ರ ಹಸ್ತಾಂತರಿಸಿದರು.