ಎಸ್ ಜೆ ಎಂ ರಾಜ್ಯ ಮಟ್ಟದ ಪ್ರತಿಭಾ ಸಂಗಮದಲ್ಲಿ ಗಾಂಧಿನಗರ ಮದರಸಕ್ಕೆ 7 ಪ್ರಥಮ 2 ದ್ವಿತೀಯ, 1ತೃತಿಯ ಸ್ಥಾನ

0

ಸುನ್ನಿ ಜಂಹಿಯ್ಯತುಲ್ ಮುಅಲ್ಲಿಮೀನ್ (ಎಸ್ ಜೆ ಎಂ )ಹಮ್ಮಿಕೊಂಡ ರಾಜ್ಯಮಟ್ಟದ ಪ್ರತಿಭಾ ಸಂಗಮದಲ್ಲಿ ಸುಳ್ಯ ಗಾಂಧಿನಗರ ಮದ್ರಸದ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ 7 ಪ್ರಥಮ, 2 ದ್ವಿತೀಯ 1 ತೃತಿಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹೈ ಝೋನ್ ವಿಭಾಗದಲ್ಲಿ ಬುರ್ದಾ ಆಲಾಪನೆಯಲ್ಲಿ
ಹಂಝತುಲ್‌ ಕರ್ರಾರ್,ಲಾಝಿಮ್,ಆಶಿಕ್,ಹಿಶಾಮ್& ತಂಝೀಮ್ ರವರು ಪ್ರಥಮ
ಸೈನ್ಸ್ ಮೊಡೆಲ್ ನಲ್ಲಿ ಶಮ್ಮಾಸ್ ಅಬ್ದುಲ್ಲಾ ಹಾಗೂ ಅಬ್ದುರ್ರಹ್ಮಾನ್ ಅಲಿ ದ್ವಿತೀಯ
ಕನ್ನಡ ಹಾಡು-ಲಾಝಿಮ್ ತೃತೀಯ ಸ್ಥಾನ ಪಡೆದಿದ್ದಾರೆ.

ಗ್ರೌಂಡ್ ಝೋನ್ ವಿಭಾಗದಲ್ಲಿ
ಖುರ್ಹಾನ್ ಕಂಠ ಪಾಠ ದಲ್ಲಿ ಅಶಾಝ್ ಝಮೀರ್ ಪ್ರಥಮ,ಕಥೆ ಹೇಳುವುದು – ಉಝೈರ್ ಅಬ್ಬಾಸ್ ಪ್ರಥಮ ಸ್ಥಾನ ಪಡೆದು ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸಕ್ಕೆ ಕೀರ್ತಿ ತಂದಿದ್ದಾರೆ.