ಎಡಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ನಡೆಯಿತು. ಸಭಾಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಯ ಅಧ್ಯಕ್ಷ ಜನಾರ್ದನ ಪರ್ಲ ವಹಿಸಿದ್ದರು. ಕ್ರೀಡಾಕೂಟದ ಉದ್ಘಾಟನೆಯನ್ನು ಎಡಮಂಗಲ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ರಾಮಣ್ಣ ಜಾಲ್ತಾರು ನೆರವೇರಿಸಿದರು. ಧ್ವಜಾರೋಹಣವನ್ನು ಪಂಜ ಗಸ್ತು ಅರಣ್ಯ ಪಾಲಕರಾದ ಮನೋಹರ್ ಕೆ ಬಿ ನೆರವೇರಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಪದ್ಮನಾಭ ಸರ್ವರನ್ನು ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯರಾದ ಅಬ್ದುಲ್ ಖಾದರ್ ಅವರು ಪ್ರಾಸ್ತಾವಿಕ ನುಡಿದರು.
ವೇದಿಕೆಯಲ್ಲಿ ಶಾಲಾ ಅಧ್ಯಾಪಕರಾದ ಆನಂದ ಕೆ ಎಸ್, ಸವಿತಾ, ಪದ್ಮಿನಿ ಎಂ ,ಸಂತೋಷ್ ಎಸ್ ಪಿ , ಪೊಡಿಯ ಪಿ, ಪವನ ಎಚ್. ಎಸ್. ಪ್ರ. ಶಿಕ್ಷಣಾರ್ಥಿ ವೀಣಾ ,ನಮೃತಾ ಉಪಸ್ಥಿತರಿದ್ದರು .ಶಾಲಾ ಹಿರಿಯ ಶಿಕ್ಷಕರಾದ ಆನಂದ ಕೆ ಎಸ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಆಂಗ್ಲ ಭಾಷಾ ಶಿಕ್ಷಕ ಪೊಡಿಯ ಪಿ. ವಂದಿಸಿದರು.