ಅಡ್ಪಂಗಾಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಗಳನ್ನು ಕ್ಷೇತ್ರದ ಧರ್ಮದರ್ಶಿ ಹಾಗೂ ಗುರುಸ್ವಾಮಿಗಳಾದ ಶಿವಪ್ರಕಾಶ ಅಡ್ಪಂಗಾಯರವರು ಚಿತೇಶ್ ಯೂಟ್ಯೂಬ್ ಚಾನೆಲ್ ನಲ್ಲಿ ಡಿ. 8ರಂದು ಬಿಡುಗಡೆ ಮಾಡಿ ಶುಭ ಹಾರೈಸಿದರು. ‘ನೀನು ಹರಸದೆ ಬಾಳು ಎಲ್ಲಿದೆ’ ಮತ್ತು ‘ಸ್ವಾಮಿಯ ನೋಡಲು ಚಂದ’ ಎಂಬ ಎರಡು ಅಯ್ಯಪ್ಪ ಸ್ವಾಮಿಯ ಹಾಡುಗಳನ್ನು ಪೆರುಮಾಳ್ ಲಕ್ಷ್ಮಣ ಸಾಹಿತ್ಯ ಬರೆದು, ಬಾಲಚಂದ್ರ ಬಿ ಕಾಸರಗೋಡು ಹಾಗೂ ಪುಷ್ಪಾವತಿ ಡಿಯವರು ಹಾಡಿದ್ದಾರೆ. ಬಿಡುಗಡೆಯ ಬಳಿಕ ಸ್ವಾಮಿಗೆ ಮಂಗಳಾರತಿ ನಡೆಯಿತು.
ಈ ಸಂದರ್ಭದಲ್ಲಿ ರೋಜಾ ಷಣ್ಮುಖ ಗುರುಸ್ವಾಮಿ ಶಿಷ್ಯ ವೃಂದ ಶಿವಮೊಗ್ಗ, ಶ್ರೀಮತಿ ಶೋಭಾ ರಾಮಚಂದ್ರ ಮೇನಾಲ, ಚಂದ್ರಶೇಖರ ಅಡ್ಪಂಗಾಯ ಕಾಯರ್ತೋಡಿ, ಗೋಪಾಲ ಗುರುಸ್ವಾಮಿ ಪೇರಾಲು, ಶ್ರೀಮತಿ ಭಾಗೀರಥಿ ಶಿವಪ್ರಕಾಶ ಸನ್ನಿಧಾನ ಅಡ್ಪಂಗಾಯ, ಶ್ರೀಮತಿ ಮಧುರ ಮಿಥುನ ಅಡ್ಪಂಗಾಯ, ಬಾಲಕೃಷ್ಣ ಮೇನಾಲ, ಶ್ರೀಮತಿ ಧನಲಕ್ಷ್ಮಿ ಸಂತೋಷ್ ಅಡ್ಪಂಗಾಯ, ಅಜ್ಜಾವರ, ಸುಜಿ ಸುಳ್ಯ, ಶಾಂತರಾಮ ಕಣಿಲೆಗುಂಡಿ, ಸುಂದರ ಪಾಟಾಳಿ, ಅಯ್ಯಪ್ಪ ವೃತಧಾರಿಗಳು, ಹಾಗೂ ಭಕ್ತಾದಿಗಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ, ಉಪಹಾರ ನಡೆಯಿತು