ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಒಸಾಟ್ ಸಂಸ್ಥೆಯಿಂದ ನಿರ್ಮಾಣವಾದ ಹೊಸ ಕಟ್ಟಡ ಶೀಘ್ರದಲ್ಲಿ ಉದ್ಘಾಟನೆ

0

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಒಸಾಟ್ ಸಂಸ್ಥೆಯ ವತಿಯಿಂದ ನೂತನವಾಗಿ ನಿರ್ಮಾಣವಾದ ಕಟ್ಟಡ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ.
ಜನವರಿ ತಿಂಗಳಲ್ಲಿ ಮೂರು ದಿನ ಸಂಭ್ರಮದಿಂದ ನಡೆಯುವ ವಸಂತ ಸಂಭ್ರಮ ಕಾರ್ಯಕ್ರಮದಲ್ಲಿ ಕಟ್ಟಡದ ಉದ್ಘಾಟನೆ ನಡೆಯಲಿದೆ.
ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಒಂದು ಅಂತಸ್ತಿನ ಕಟ್ಟಡದ ಎಲ್ಲಾ ಕೆಲಸಗಳು ಪೂರ್ತಿಗೊಳ್ಳುತ್ತಿದೆ.


ಕಟ್ಟಡದಲ್ಲಿ 8 ತರಗತಿ ಕೊಠಡಿಗಳು ನಿರ್ಮಾಣವಾಗಿದೆ.
ಗಂಡು ಮಕ್ಕಳ ಶೌಚಾಲಯ 1, ಹೆಣ್ಣು ಮಕ್ಕಳ ಶೌಚಾಲಯ 1 ನಿರ್ಮಾಣವಾಗಿದೆ.
ಎಲ್ಲಾ ಕೊಠಡಿಗಳಿಗೆ ಟೈಲ್ಸ್ ಅಳವಡಿಸಲಾಗಿದೆ.ವಯರಿಂಗ್ ,ಪೈಂಟಿಂಗ್ ಹಾಗೂ ಇನ್ನಿತರ ಎಲ್ಲಾ ಕೆಲಸಗಳು ಪೂರ್ತಿಗೊಂಡಿದೆ.
ದಿ.ಶ್ರೀಮತಿ ವಾಗ್ದೇವಿ ಮತ್ತು ದಿ.ಶ್ರೀಮತಿ ಸೀತಾರತ್ನ ರವರ ಸ್ಮರಣಾರ್ಥ ಶ್ರೀಮತಿ ವಿಜಯ ಮತ್ತು ವಸಂತರಾಮ ಸೋಮಯಾಜಿ ಅಮೇರಿಕಾ ಇವರು ಕೊಡುಗೆಯಾಗಿ ನೀಡಿದ್ದಾರೆ.
ಪುತ್ತೂರಿನ ಸೃಷ್ಡಿ ಕನ್ ಸ್ಟ್ರಕ್ಸನ್ ನ ಶಿವಪ್ರಸಾದ್ ಪುತ್ತೂರು ಇವರು ಕಂಟ್ರಾಕ್ಟರ್ ಆಗಿ ಕೆಲಸ ನಿರ್ವಹಿಸಿದ್ದಾರೆ.