ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ( ರಿ ) ಸುಳ್ಯ ತಾಲೂಕು ಸಂಪಾಜೆ ವಲಯದ ತೊಡಿಕಾನ ಕಾರ್ಯಕ್ಷೇತ್ರ ದ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದಡಿಯಲ್ಲಿ ಸುಳ್ಯ ಸೀಮೆ ಮಹತ್ತೋಭಾರ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ರಮವು ದ. 16 ರಿಂದ ಆರಂಭವಾಗುವ ಧನು ಪೂಜಾ ಪ್ರಯುಕ್ತ ದೇವಳದ ಒಳಾಂಗಣ ಹೊರಾಂಗಣ ದೇವಳದ ಪರಿಸರದ ಸುತ್ತಮುತ್ತ ಹಾಗೂಮತ್ಸ್ಯತೀರ್ಥ ಗುಂಡಿಯವರೆಗೆ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು.

ಶ್ರೀಮಲ್ಲಿಕಾರ್ಜುನ ದೇವಾಲಯದ ವ್ಯವಸ್ಥಾಪನ ಸದಸ್ಯರು ಒಕ್ಕೂಟದ ಸಂಘಗಳ ಸದಸ್ಯರುಗಳು ವಲಯ ಅಧ್ಯಕ್ಷರಾದ ಹೂವಯ್ಯ ಗೌಡ ಒಕ್ಕೂಟದ ಅಧ್ಯಕ್ಷರಾದ ಜನಾರ್ದನ ಬಾಳೆಕಜೆ ಅಡ್ಯಡ್ಕ ಪ್ರತಿನಿಧಿ ಕಲ್ಪನಾ ಗೂನಡ್ಕ ಸೇವಾ ಪ್ರತಿನಿಧಿ ತಾರ ಹಾಗೂ ತೊಡಿಕಾನ ಸೇವಾ ಪ್ರತಿನಿಧಿ ಸುಂದರ ಬಾಜಿನಡ್ಕ ಉಪಸ್ಥಿತರಿದ್ದು ಶ್ರಮದಾನವನ್ನು ಯಶಸ್ವಿಗೊಳಿಸಲು ಸಹಕರಿಸಿದ್ದರು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಉಳುವಾರು ರವರು ಧನ್ಯವಾದ ಸಮರ್ಪಿಸಿದರು. ಅರ್ಚಕರು ಶ್ರೀ ದೇವರ ಪ್ರಸಾದ ನೀಡಿ ಶುಭ ಹಾರೈಸಿದರು