ದ. 16ರಂದು ನೂತನ ಪದಾಧಿಕಾರಿಗಳ ಪದಗ್ರಹಣ
ಬೆಳ್ಳಾರೆ ಜೇಸಿಐನ 2025ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ರೈ ಬೀಡು ಮತ್ತು ಕಾರ್ಯದರ್ಶಿಯಾಗಿ ಉಮೇಶ್ ಮಣಿಕ್ಕಾರ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದ. 16ರಂದು ಸಂಜೆ 6.30ಕ್ಕೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.
ವಲಯ 15ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಪೂರ್ವ ವಲಯಾಧ್ಯಕ್ಷ ಚಂದ್ರಹಾಸ ರೈ, ವಲಯ ಉಪಾಧ್ಯಕ್ಷ ಸುಹಾಸ್ ಎ ಪಿ ಮರಿಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 2025ನೇ ಸಾಲಿನ ಬೆಳ್ಳಾರೆ ಜೇಸಿಐ ಘಟಕಾಡಳಿತ ಮಂಡಳಿಯ ನಿಕಟಪೂರ್ವಧ್ಯಕ್ಷರಾಗಿ ಜಗದೀಶ್ ರೈ ಪೆರುವಾಜೆ, ಉಪಾಧ್ಯಕ್ಷರುಗಳಾಗಿ ಶಿವಕುಮಾರ್ ರೈ ಮಣಿಕ್ಕಾರ, ಪೂರ್ಣಿಮಾ ಟಿ, ಅನಿತಾ ಪದ್ಮನಾಭ, ಶೇಷಪ್ಪ ಮಠತ್ತಡ್ಕ, ಪ್ರವೀಣ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ವೇದಿತ್ ರೈ ಎಂ, ಖಾಜಾoಜಿಯಾಗಿ ಗಣೇಶ್ ಕುಲಾಲ್ ತಡಗಜೆ, ನಿರ್ದೇಶಕರುಗಳಾಗಿ ವಾಸುದೇವ ಪೆರುವಾಜೆ, ಭವ್ಯ, ರಮೇಶ್ ಎಂ, ಪುರುಷೋತ್ತಮ ಪೆರುವಾಜೆ,ಯಾಹಿಯಾ ಬೆಳ್ಳಾರೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.