ಪ್ರಣವ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು(ಪ್ರಣವ ಸೌಹಾರ್ದ ಸಹಕಾರಿ ಸಂಘ (ನಿ) ಇದರ ಅಂಗ ಸಂಸ್ಥೆ) ಮತ್ತು ಸುಳ್ಯ ರೈತ ಉತ್ಪಾದಕ ಸಂಸ್ಥೆ ಇವರ ಸಹಯೋಗದಲ್ಲಿ ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್ ಇವರ ವತಿಯಿಂದ ಸೌರ ವಿದ್ಯುತ್ ಯೋಜನೆಗಳ ಕುರಿತು ಕಾರ್ಯಗಾರ, ಸ್ವ ಉದ್ಯೋಗ ಮಾಹಿತಿ ಹಾಗೂ ಪ್ರಧಾನ ಮಂತ್ರಿ ಸೂರ್ಯ ಫರ್ ಯೋಜನೆಯ ಉಚಿತ ನೋಂದಣಿ ಕಾರ್ಯಕ್ರಮವು ಸುಳ್ಯದ ಎ.ಪಿ.ಎಂ.ಸಿ ಸಭಾಂಗಣದಲ್ಲಿ ಡಿ.16 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ. ಬಿ ಸುಧಾಕರ ರೈ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಸೆಲ್ಕೋ ಉಪ ಪ್ರಧಾನ ವ್ಯವಸ್ಥಾಪಕ ಗುರುಪ್ರಕಾಶ್ ಶೆಟ್ಟಿ ಹಾಗೂ ಏರಿಯಾ ಮ್ಯಾನೇಜರ್ ಪ್ರಸಾದ್ ಸೌರ ವಿದ್ಯುತ್ ಯೋಜನೆಗಳ ಕುರಿತು ಮಾಹಿತಿ ನೀಡಿದರು.ಸುಳ್ಯ ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಣವೀರ್ ಕುಮಾರ್ ಬ್ಯಾಂಕ್ ಸಬ್ಸಿಡಿ ಹಾಗೂ ಇತರೆ ಮಾಹಿತಿಯನ್ನು ನೀಡಿದರು.
ಪ್ರಣವ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಜಿ. ಆರ್. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು . ಸುಳ್ಯ ಸೆಲ್ಕೋ ವ್ಯವಸ್ಥಾಪಕ ಆಶಿಕ್ ಮತ್ತು ಸಿಬ್ಬಂದಿ ವರ್ಗ, ಸುಳ್ಯ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕರುಗಳು ಸಿಬ್ಬಂದಿಗಳು,ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ ಇದರ ನಿರ್ದೇಶಕರುಗಳು ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ರೈತ ಉತ್ಪದಕ ಸಂಘದ ನಿರ್ದೇಶಕಿ ಮಧುರ ಎಂ.ಆರ್ ಪ್ರಾರ್ಥಿಸಿ, ಸಿ.ಇ.ಒ ಹರೀಶ್ ವಂದಿಸಿದರು.ಪ್ರಣವ ಶಾಖಾ ವ್ಯವಸ್ಥಾಪಕ ರಂಜಿತ್ ಆಡ್ತಲೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಣಿಪಾಲ ಸೆಲ್ಕೊ ಉಪ ಪ್ರಧಾನ ವ್ಯವಸ್ಥಾಪಕ ಗುರುಪ್ರಕಾಶ್ ಶೆಟ್ಟಿ ಸೌರ ವಿದ್ಯುತ್ ಯೋಜನೆಗಳ ಕುರಿತು ಕಾರ್ಯಗಾರ, ಸ್ವ ಉದ್ಯೋಗ ಮಾಹಿತಿ ಮತ್ತು ಸುಳ್ಯ ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಣವೀರ್ ಕುಮಾರ್ ಮತ್ತು ಸುಳ್ಯ ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಣವೀರ್ ಕುಮಾರ್ ಪ್ರಧಾನಮಂತ್ರಿ ಸೂರ್ಯ ಫರ್ ಯೋಜನೆ – ರಾಷ್ಟ್ರೀಕೃತ ಬ್ಯಾಂಕಿನ ಪಾತ್ರ ಮತ್ತು ಕೃಷಿಕರಿಗೆ ನೀಡುವ ಸೌಲಭ್ಯ ಮತ್ತು ಸಾಲಗಳ ಬಗ್ಗೆ ಮಾಹಿತಿ ನೀಡಿದರು.
ಸುಮಾರು 100 ಕ್ಕೂ ಅಧಿಕ ಮಂದಿ ರೈತಾಪಿ ಬಂಧುಗಳು ಹಾಗೂ ಉದ್ದಿಮೆದಾರರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು