ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಕಾರ್ತಿಕ ಪೂಜಾ ಸಮಿತಿಯ ಸಭೆ

0

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಕಾರ್ತಿಕ ಪೂಜಾ ಸಮಿತಿಯ ಸಭೆಯು ಇಂದು ಕಾಯರ್ತೋಡಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಸಂಚಾಲಕ ಚಂದ್ರಶೇಖರ ಅಡ್ಪಂಗಾಯರವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕಾರ್ತಿಕ ಪೂಜೆಯು ಕಳೆದು ಇದರ ಉಳಿಕೆ ಹಣವನ್ನು ಸೇರಿಸಿ ಮಹಾವಿಷ್ಣು ದೇವಾಲಯದ ಗರ್ಭಗುಡಿಯ ದ್ವಾರ ಮತ್ತು ಮೆಟ್ಟಿಲುಗಳಿಗೆ ಹಿತ್ತಾಳೆ ಹೊದಿಕೆ ಮಾಡಿಸುವ ಸಲುವಾಗಿ ಪುತ್ತೂರು ಜನಾರ್ದನ ಆಚಾರ್ಯರಿಗೆ ರೂ. 2,15,೦೦೦ ವನ್ನು ನೀಡುವಂತೆ ತೀರ್ಮಾನಿಸಲಾಗಿದ್ದು, ಅದರಲ್ಲಿ ರೂ. 65 ,೦೦೦ ರೂ.ವನ್ನು ಮುಂಗಡವಾಗಿ ನೀಡಲಾಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಚಂದ್ರಕಾಂತ್ ಉಮ್ಮಡ್ಕ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಿ.ಕೆ. ಉಮೇಶ್, ಮಾಜಿ ಸದಸ್ಯರುಗಳಾದ ಆನಂದ ನಡುಮುಟ್ಲು, ಕೃಷ್ಣ ಬೆಟ್ಟ, ನಾರಾಯಣ ಆಚಾರ್ಯ ಕಾಯರ್ತೋಡಿ, ವಿಠಲ ಬಾಣೂರು, ಪದ್ಮನಾಭ ಅಳಿಕೆ, ಕಾರ್ತಿಕ ಪೂಜಾ ಸಮಿತಿಯ ಕಾರ್ಯದರ್ಶಿ ಬೆಳ್ಯಪ್ಪ ಗೌಡ, ಜಿನ್ನಪ್ಪ ಪೂಜಾರಿ ಮೊದಲಾದವರಿದ್ದರು.