ಯಶಸ್ವಿಯಾಗಿ ನಡೆದ ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಅಹಃಪೂರ್ಣ ಭಜನಾ ಸೇವೆ ಹಾಗೂ ಸಾರ್ವಜನಿಕ ಶ್ರೀ ಲಕ್ಷ್ಮಿ ಸಹಿತ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ

0

ಪ್ರಯತ್ನ, ಪ್ರಾರ್ಥನೆ, ಪ್ರಾಮಾಣಿಕತೆಯಿಂದ ದೇಶದ ಪ್ರಗತಿ ಸಾಧ್ಯ : ಶ್ರೀ ಸಚ್ಚಿದಾನಂದ ಭಾರತೀ ಶ್ರೀ

90 ವರ್ಷಗಳ ಇತಿಹಾಸವಿರುವ ಜಾಲ್ಸೂರು ಗ್ರಾಮದ ಸೋಣಂಗೇರಿಯ ಶ್ರೀ ಕೃಷ್ಣ ಭಜನಾ ಮಂದಿರ ಇಲ್ಲಿ ಪ್ರಶ್ನಾರೂಢ ರಾಶಿ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಶ್ರೀ ಕ್ಷೇತ್ರಾಭಿವೃದ್ಧಿಗಾಗಿ ವೇ.ಮೂ.ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಇವರ ನೇತೃತ್ವದಲ್ಲಿ ಅಹಃಪೂರ್ಣ ಭಜನಾ ಸೇವೆ ಹಾಗೂ ಸಾರ್ವಜನಿಕ ಶ್ರೀ ಲಕ್ಷ್ಮಿ ಸಹಿತ ಸತ್ಯ ನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಡಿ.15ರಂದು ಯಶಸ್ವಿಯಾಗಿ ನಡೆಯಿತು.

ಬೆಳಗ್ಗೆ ಶ್ರೀ ಮಹಾಗಣಪತಿ ಹವನ, ಶ್ರೀ ಮಹಾಗಣಪತಿ ಹವನ ಪೂರ್ಣಾಹುತಿ, ಭಜನಾ ಸೇವೆ, ಮಹಾಪೂಜೆ, ಸಾರ್ವಜನಿಕ ಸತ್ಯನಾರಾಯಣ ದೇವರ ಪೂಜೆ ನಡೆಯಿತು.

ಸಂಜೆ ನಡೆದ ಸಭಾ ಕಾರ್ಯಕ್ರಮಕ್ಕೆ ಆಶೀವರ್ಚನ ನೀಡಲು ಆಗಮಿಸಿದ ಎಡನೀರು ಮಠದ ಶ್ರೀಗಳಾದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಯವರನ್ನು ಸೋಣಂಗೇರಿ ವೃತ್ತದಿಂದ ಮಂದಿರದವರೆಗೆ ಪೂರ್ಣಕುಂಭ ಸ್ವಾಗತ ಹಾಗೂ ಕುಣಿತ ಭಜನೆಯೊಂದಿಗೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಾಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂದಿರ ಅಧ್ಯಕ್ಷರಾದ ಗಿರಿಧರ ಗೌಡ ನಾಯರ್‌ಹಿತ್ಲು ವಹಿಸಿದ್ದರು. ಭಗವದ್ಗೀತೆ ಪ್ರವಚನಕಾರರಾದ ವಿದ್ವಾನ್ ಕಿರಣ್ ಕುಮಾರ್ ಪಡುಪಣಂಬೂರು ರವರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ಮನುಷ್ಯ ತನ್ನನ್ನು ತಾನು ಅರಿತು ಸಮಸ್ಯೆಗಳಿಂದ ಹೊರಬರುಲು ಸಮಚಿತ್ತತೆಯನ್ನು ಇಂತಹ ಭಜನ ಮಂದಿರ ಸಹಾಯಮಾಡುತ್ತದೆ.

ಸಮಾಜದಲ್ಲಿ ನಿನಗೆ ತಪ್ಪು ಎನಿಸಿದರೆ ಅದನ್ನು ನೇರವಾಗಿ ಹೇಳು ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ಹೀಗೆ ಭಗವದ್ಗೀತೆಯ ಕೆಲ ಸಂದೇಶವನ್ನು ಹೇಳುತ್ತಾ ಬದುಕಿನ ಯುದ್ಧದಲ್ಲಿ ಹೇಗೆ ಹೋರಾಡಬೇಕು ಎನ್ನುವ ಕಿವಿ ಮಾತನ್ನು ಸೇರಿದ ಸಭಿಕರಿಗೆ ತಿಳಿಸಿದರು.

ಕಾರ್ಯಕ್ರಮದ ಅಭ್ಯಾಗತರಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಪುರೋಹಿತ ನಾಗರಾಜ ಭಟ್‌ರವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬಳಿಕ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳರವರು ಆಶೀವರ್ಚನ ನೀಡಿ ಮಾತನಾಡಿ ಪ್ರಯತ್ನ, ಪ್ರಾರ್ಥನೆ ಮತ್ತು ಪ್ರಾಮಾಣಿಕತೆಯಿಂದ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ. ಇತಿಹಾಸವಿರುವ ಈ ಶ್ರೀ ಕೃಷ್ಣ ಭಜನಾ ಮಂದಿರದ ಪುನರ್ ನಿರ್ಮಾಣ ಕಾರ್ಯಕ್ರಮ ಮುಂದಾಗಿದ್ದು, ಊರಿನವರ , ದಾನಿಗಳ ಸಹಕರಾದಿಂದ ಆದಷ್ಟು ಶೀಘ್ರವಾಗಿ ಆಗಲಿ, ಮುಂದಿನ ದಿನಗಳಲ್ಲಿ ನಾನು ಈ ಮಂದಿರಕ್ಕೆ ಪುನಃ ಬರುವಂತಾಗಲಿ ಎಂದು ಶುಭ ಹಾರೈಸಿದರು.

ಬಳಿಕ ಶ್ರೀ ಗಳ ಉಪಸ್ಥಿತಿಯಲ್ಲಿ ಶ್ರೀ ಸತ್ಯನಾರಾಯಣ ಪೂಜಾ, ಮಹಾಮಂಗಳಾರತಿ ನಡೆಯಿತು. ಮಂದಿರದ ಸಂಚಾಲಕ ಸಂತ್ಯಶಾ0ತಿ ತ್ಯಾಗಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶುಭ ಕಾಡುತೋಟ ಪ್ರಾರ್ಥಿಸಿ, ಹರಿಣಾಕ್ಷಿ ನಡುಮನೆ ಸ್ವಾಗತಿಸಿ, ಲೀಲಾವತಿ ನಡುಮನೆ ವಂದಿಸಿದರು. ಪೂಜಾಶ್ರೀ ವಿತೇಶ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು
.

ಹೈಲೈಟ್ಸ್
1.ಮಂದಿರದಿ೦ದ ಸೋಣಂಗೇರಿ ವೃತ್ತದ ವರೆಗೆ ಲೈಟಿಂಗ್ಸ್ & ಕೇಸರಿ ತೋರಣ ಹಾಕಲಾಗಿತ್ತು.

2.ಮಹಾವಿಷ್ಣು ಕುಣಿತ ಭಜನಾ ತಂಡ ಕುಕ್ಕುಜಡ್ಕ, ಶಾರದಾಂಬ ಭಜನಾ ಮಂಡಳಿ ಪಂಜ ತಂಡದಿ0ದ ಕುಣಿತ ಭಜನೆ & ಊರಿನ ಮಹಿಳೆಯರ ಪೂರ್ಣ ಕುಂಭ ಸ್ವಾಗತ ಕಾರ್ಯಕ್ರಮದ ಕೇಂದ್ರ ಬಿಂದು ಆಗಿತ್ತು.

3.ಆಗಮಿಸಿ ಭಕ್ತಾಧಿಗಳಿಗೆ ಬೆಳಿಗ್ಗಿನಿಂದ ರಾತ್ರಿಯವರೆಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು .

4.ಸ್ವಾಮೀಜಿಯವರ ಆಗಮನದ ಹಿನ್ನಲೆ ಗೃಹರಕ್ಷದಳ ಸಿಬ್ಬಂದಿಯವರಿ0ದ ಸಂಪೂರ್ಣ ವಾಹನ ಸಂಚಾರ ನಿಯಂತ್ರಣ & ಬಂದೋಬಸ್ತ್ ಮಾಡಲಾಗಿತ್ತು.

5. ಶ್ರೀ ಕೃಷ್ಣ ಭಜನಾ ಮಂದಿರ ಸೋಣಂಗೇರಿ, ಶ್ರೀ ಅಯ್ಯಪ್ಪ ಭಜನಾ ಮಂದಿರ ಸೋಣಂಗೇರಿ, ಶ್ರೀ ಕಾತ್ಯಾಯಿನಿ ಭಜನಾ ತಂಡ ಕೆದಿಕಾನ, ಶ್ರೀ ಬಾಲಮುರುಗನ್ ಭಜನಾ ತಂಡ ಕಕ್ಕನೂರು, ಶ್ರೀ ವೀರಾಂಜನೆಯ ಭಜನಾ ತಂಡ ಸುಳ್ಯ, ಶ್ರೀ ಸದಾಶಿವ ಭಜನಾ ತಂಡ ಆಲೆಟ್ಟಿ, ಶ್ರೀ ಅಯ್ಯಪ್ಪ ಭಜನಾ ಮಂದಿರ ಮಂಡೆಕೋಲು. ಶ್ರೀ ಗುರು ರಾಘವೇಂದ್ರ ಸ್ವಾಮಿ ಭಜನಾ ಮಂದಿರ ಜಾಲ್ಸೂರು , ಸ.ಉ.ಹಿ.ಪ್ರಾ.ಶಾಲೆ ಸೋಣಂಗೇರಿ, ಶ್ರೀ ಶಿವಭಕ್ತವೃಂದ ಭಜನಾ ತಂಡ ಬಾಂಜಿಕೋಡಿ, ಶ್ರೀ ಧರ್ಮಶಾಸ್ತç ಭಜನಾ ತಂಡ ಪಿಲಿಕಜೆ, ಶ್ರೀ ಶಾರದಾಂಬ ಭಜನಾ ಮಂದಿರ ಪಂಜ, ದೀಪಾಂಜಲಿ ಭಜನಾ ತಂಡ ಶಾಂತಿನಗರ, ಮಹಿಳಾ ಪರಿಷತ್ತು ಸುಳ್ಯ ಈ ತಂಡಗಳಿ0ದ ಬೆಳಗ್ಗಿನಿಂದ ಸಂಜೆಯವರೆಗೆ ನಿರಂತರವಾಗಿ ಮಂದಿರದಲ್ಲಿ ಭಜನೆ ಸೇವೆ ನಡೆಯಿತು.