ಸುಳ್ಯದ ಕುರುಂಜಿಭಾಗ್‍ನಲ್ಲಿರುವ ಪಾಟ್‍ಶಾಟ್ಸ್ ಸುಳ್ಯದಲ್ಲಿ ಆಹ್ವಾನಿತ ತಂಡಗಳ ಸ್ಪಿರಿಟ್ ಆಫ್ ಪ್ರೀಡಮ್ ಸ್ನೂಕರ್ ಚಾಂಪಿಯನ್‍ಶಿಪ್-2024 ಪಂದ್ಯಾಟವು ಡಿ.14 ಮತ್ತು 15 ರಂದು ನಡೆಯಿತು.
ಪಂದ್ಯಾಟದ ಉದ್ಘಾಟನೆಯನ್ನು ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರಾದ ಶ್ರೀ ಪಿ.ಬಿ. ಸುಧಾಕರ ರೈಯವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಭಗವತಿ ಹಾರ್ಡ್‍ವೇರ್ಸ್‍ನ ಮ್ಹಾಲಕರಾದ ಲ| ರಮೇಶ್ ಶೆಟ್ಟಿ, ಕುರುಂಜಿಭಾಗ್ ಕ್ಯಾಂಪಸ್ ಫ್ಯಾನ್ಸಿಯ ಮ್ಹಾಲಕರಾದ ವಿಶ್ವನಾಥನ್, ಶೆಟ್ಟಿ ಟೈಲರ್ಸ್ ಬೂಡು ಇದರ ಮ್ಹಾಲಕರಾದ ಕುಸುಮಾಧರ ರೈ ಬೂಡು, ಕ್ಯೂ ಕ್ಲಬ್ ಕುರುಂಜಿಭಾಗ್‍ನ ಮ್ಹಾಲಕರಾದ ಲಿಖೇಶ್ ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಗೇಮ್ ಆನ್ ಸ್ನೂಕರ್ ಮತ್ತು ಫೂಲ್ ಸುರತ್ಕಲ್‍ನ ಜೈಕಿಶನ್ ಹಾಗೂ ದ್ವಿತೀಯ ಬಹುಮಾನವನ್ನು ಪಾಟ್‍ಶಾಟ್ಸ್ ಸುಳ್ಯದ ಕಿಶೋರ್ ಕುಮಾರ್ ಶೆಟ್ಟಿ ಬೂಡು ಪಡೆದುಕೊಂಡರು. ಸೆಮಿ ಫೈನಲ್ ಪ್ರವೇಶಿಸಿದ ರಿಯಾನ್ ಮಂಗಳೂರು ಮತ್ತು ಅನಂತ್ ಮಂಗಳೂರು ಇವರುಗಳಿಗೆ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು. ಅತ್ಯಧಿಕ ಅಂಕ ಗಳಿಸಿದ ಟ್ರೋಫಿಯನ್ನು ಗೇಮ್ ಆನ್ ಸ್ನೂಕರ್ ಮತ್ತು ಫೂಲ್ ಸುರತ್ಕಲ್‍ನ ಜೈಕಿಶನ್ ಇವರು ಪಡೆದುಕೊಂಡರು.
ಸಮರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಬೂಡು ರಾಧಾಕೃಷ್ಣ ರೈ, ಶ್ರೀ ಭಗವತಿ ಯುವ ಸೇವಾ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ಕೇರ್ಪಳ, ಎನ್.ಎಸ್.ಎ ಕಾಂಪ್ಲೆಕ್ಸ್‍ನ ಮ್ಹಾಲಕರಾದ ಮೊೈದೀನ್ ಕುಂಞ, ಟೌನ್ ಕ್ಯೂಬ್‍ನ ಮ್ಹಾಲಕರಾದ ನಿಝಾಮ್ ಭಾಗವಹಿಸಿದ್ದರು.
ಪಂದ್ಯಾಟದಲ್ಲಿ ಸುಳ್ಯ, ಪುತ್ತೂರು, ಮಂಗಳೂರು, ಸುರತ್ಕಲ್, ಮಡಿಕೇರಿ ಹಾಗೂ ಕುಶಾಲನಗರದ ಆಟಗಾರರು ಭಾಗವಹಿಸಿದ್ದರು.
ಸಂಸ್ಥೆಯ ಮ್ಹಾಲಕರಾದ ಕಿಶೋರ್ ಕುಮಾರ್ ಶೆಟ್ಟಿ ಬೂಡು, ಸ್ವಾಗತಿಸಿ ವಂದಿಸಿದರು.