ಕಳಂಜ ಗ್ರಾ.ಪಂ ನ ಮಹಿಳಾ ಗ್ರಾಮ ಸಭೆ

0

ವರ್ಗಾವಣೆ ಗೊಂಡ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ದೀಪ್ತಿ, ಶ್ರೀಮತಿ ರಂಜಿತ ಅವರಿಗೆ ಬೀಳ್ಕೊಡುಗೆ

ಕಳಂಜ ಗ್ರಾ.ಪಂ‌ ನ 2024 – 25 ನೇ ಸಾಲಿನ ಮಹಿಳಾ ಗ್ರಾಮ ಸಭೆಯು
ಪಂಡಿತ್ ದೀನದಯಾಳ್ ಉಪಾಧ್ಯಾಯ ಸಮುದಾಯ ಭವನ ಅಯ್ಯನಕಟ್ಟೆ ಇಲ್ಲಿ ಡಿ.18 ರಂದು ನಡೆಯಿತು‌.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಬೇರಿಕೆ, ಉಪಾಧ್ಯಕ್ಷರಾದ ಶ್ರೀಮತಿ ಪ್ರೇಮಲತಾ ಪಂಚಾಯತ್, ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗೀತಾ, ಕಾರ್ಯದರ್ಶಿ ಪದ್ಮಯ ಕೆ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಉಷಾ, ಸಿಸ್ಟರ್ ಶ್ರೀಮತಿ ಬೇಬಿ ಸಿ ಹೆಚ್ , ಶ್ರೀಮತಿ ಶಿಲ್ಪ ಉಪಸ್ಥಿತರಿದ್ದರು. ಈ
‌ ಸಂದರ್ಭದಲ್ಲಿ ಅಯ್ಯನಕಟ್ಟೆ ಅಂಗನವಾಡಿ ಕಾರ್ಯಕರ್ತೆಯಾಗಿದ್ದು ಬಂಟ್ವಾಳದ ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆಗೊಂಡ ಶ್ರೀಮತಿ ದೀಪ್ತಿ, ವಿಷ್ಣು ನಗರದ ಅಂಗನವಾಡಿ ಕಾರ್ಯಕರ್ತೆಯಾಗಿದ್ದು ಪೆರುವಾಜೆ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಗೊಂಡ ಶ್ರೀಮತಿ ರಂಜಿತ ಇವರ ಬೀಳ್ಕೊಡುವ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಸ್ತ್ರೀಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಭಾಗವಹಿಸಿದ್ದರು.