ಪಂಜ ಕರಿಕ್ಕಳ ಎಂಬಲ್ಲಿ ಮಧ್ಯಾಹ್ನ ಸಮಯದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ರಸ್ತೆಯಲ್ಲಿ ದಾಟುತ್ತಿರುವ ದೃಶ್ಯ ಕಂಡು ಬಂದಿದೆ.
ಈ ರಸ್ತೆಯಲ್ಲಿ ಬರುತ್ತಿರುವ ವಾಹನ ಸವಾರರು ಹಾವು ದಾಟುತ್ತಿರುವುದನ್ನು ಕಂಡು ವಾಹನಗಳನ್ನು ನಿಲ್ಲಿಸತೊಡಗಿದರು. ರಸ್ತೆಯ ಮೇಲೆ ಹಾವು ನಿಧಾನವಾಗಿ ದಾಟುತ್ತಿದ್ದರಿಂದ ಕೆಲ ನಿಮಿಷಗಳ ಕಾಲ ವಾಹನಗಳು ಸಾಲು ಗಟ್ಟಿ ನಿಲ್ಲಬೇಕಾಯಿತು.