ಪಂಜದ ಕೆರೆಮೂಲೆ ದಿ.ಮೊಂಟ ನಾಯ್ಕ ಮತ್ತು ದಿ. ಶ್ರೀಮತಿ ಕಮಲ ದಂಪತಿಗಳ ಪುತ್ರ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್
ಅಸಿಸ್ಟೆಂಟ್ ರಿಸರ್ವ್ ಸಬ್-ಇನ್ಸ್‌ಪೆಕ್ಟರ್, ಕೆ. ಲಕ್ಷ್ಮಣ ರವರು ಅಲ್ಪ ಕಾಲದ ಅಸೌಖ್ಯದಿಂದ ಡಿ.19 ರಂದು ಸ್ವಗೃಹದಲ್ಲಿ ನಿಧನರಾದರು. ಅವರು ಕೆಲವು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮನೆಗೆ ಕರೆತಂದಿದ್ದರು.
ಅವರಿಗೆ 61 ವರುಷ ವಯಸ್ಸಾಗಿತ್ತು. ಅವರು ಕಳೆದ ಮೇ.31 ರಂದು ಸೇವೆಯಿಂದ ವಯೋ ನಿವೃತ್ತಿ ಹೊಂದಿರುತ್ತಾರೆ. ಅವರು ಪೋಲೀಸ್ ಇಲಾಖೆಯಲ್ಲಿ 31 ವರ್ಷ 07 ದಿನಗಳ ಸೇವೆಯನ್ನು ಸಲ್ಲಿಸಿರುತ್ತಾರೆ.ಹಿಂದೆ ಪಂಜ ಸಿ ಎ ಬ್ಯಾಂಕ್ ನಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಶ್ರೀಮತಿ ಹರಿಣಾಕ್ಷಿ, ಪುತ್ರಿ ಭಾರತಿ, ಸಹೋದರ, ಸಹೋದರಿ, ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.