ಪೆರಾಜೆ: ಬಿಜೆಪಿ ಮುಖಂಡ ದಿ. ಎ.ಸಿ. ಹೊನ್ನಪ್ಪ ಗೌಡರಿಗೆ ಶ್ರದ್ಧಾಂಜಲಿ – ನುಡಿನಮನ ಸಲ್ಲಿಕೆ

0

ಪೆರಾಜೆಯ ಹಿರಿಯ ಬಿಜೆಪಿ ಮುಖಂಡ, ಪೆರಾಜೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಅಮೆಚೂರಿನ ದಿ. ಎ.ಸಿ. ಹೊನ್ನಪ್ಪ ಅವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಸುಳ್ಯದ ಕುರುಂಜಿ ವೆಂಕಟ್ರಮಣ ಗೌಡ ಸಭಾಭವನ ಅಮರಶ್ರೀಭಾಗ್ ನಲ್ಲಿ ಡಿ.21ರಂದು ನಡೆಯಿತು.

ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ ಹಾಗೂ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರು ದಿ. ಎ.ಸಿ. ಹೊನ್ನಪ್ಪ ಗೌಡ ಅವರ ಕುರಿತು ಮಾತನಾಡಿ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಗೀತಾ , ಪುತ್ರ ಸಂಭೃತ್ ರಾಜ್, ಪುತ್ರಿ ಸುಶ್ಮಿತ, ಸಹೋದರರಾದ ಎ.ಸಿ. ವಸಂತ, ಎ.ಸಿ. ಭರತ, ಸಹೋದರಿ ಶ್ರೀಮತಿ ಪದ್ಮಿನಿ ಸೇರಿದಂತೆ ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.