ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಮಂಗಳೂರು ಸೆಂಟರ್ ಹಾಗೂGB ಅಲ್ಟ್ರಾ ಟೆಕ್ ಸಿಮೆಂಟ್ ಲಿಮಿಟೆಡ್ ವತಿಯಿಂದ ಕೊಡಮಾಡಲ್ಪಡುವ ಎಸಿಸಿಇ ಇಂಡಿಯಾ ಮಂಗಳೂರು ಅಲ್ಟ್ರಾ ಟೆಕ್ ಪ್ರಶಸ್ತಿ 2024 ಈ ಪ್ರಶಸ್ತಿಗೆ ಸುಳ್ಯ ಜಟ್ಟಿಪಳ್ಳ ರಸ್ತೆಯ ಸಮೀಪದಲ್ಲಿರುವ ಉದ್ಯಮಿ ಅಬ್ದುಲ್ ಲತೀಫ್ ಹರ್ಲಡ್ಕ ರವರ ಹರ್ಲಡ್ಕ ವಿಲ್ಲಾ ಆಯ್ಕೆಯಾಗಿದ್ದು.
ಇತ್ತೀಚೆಗೆ ಮಂಗಳೂರಿನ ಹಂಪನಕಟ್ಡೆಯ ಮಿಲಾಗ್ರಿಸ್ ಹಾಲ್ ಕಾಂಪ್ಲೆಕ್ಸ್ ನಲ್ಲಿ ನಡೆದ ಸಮಾರಂಭದಲ್ಲಿ ಎಸಿಸಿಇ ಇಂಡಿಯಾ ಅಲ್ಟ್ರಾ ಟೆಕ್ ಪ್ರಶಸ್ತಿಯನ್ನು ಹರ್ಲಡ್ಕ ವಿಲ್ಲಾ ದ ಮಾಲಕ ಲತೀಫ್ ಹರ್ಲಡ್ಕ ಸ್ವೀಕರಿಸಿದರು.
ಹರ್ಲಡ್ಕ ವಿಲ್ಲಾ ಮನೆ ನಿರ್ಮಾಣದ ಇಂಜಿನಿಯರ್ ಗಳಾದ ಶಮೀರ್ ಹಾಗೂ ರಂಜಿತ್ ಬಂಗೇರ ಯವರಿಗೂ ಬೆಸ್ಟ್ ಇಂಜಿನಿಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆಸಿಸಿಐ ಅದ್ಯಕ್ಷ ಅನಂದ್ ಜಿ ಪೈ,ಎಸಿಸಿಇ(ಐ) ಪ್ರಧಾನ ಕಾರ್ಯದರ್ಶಿ ಕಲ್ಬಾವಿ ರಾಜೇಂದ್ರ ರಾವ್,ಎಸಿಸಿಇ (ಐ)ಯ ಉಜ್ವಲ್ ಡಿಸೋಜ, ವಿನೋದ್ ಟಿ ಡಿ ಡಿಸೋಜ,ಏಕನಾಥ್ ದಂಡೆಕೇರಿ,ಅಶೋಕ್ ರೆಡ್ಡಿ,ರಾಘವೇಂದ್ರ ದೇಸಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.