ಮಾದಕ ಮುಕ್ತ ಸಮಾಜ ನಿರ್ಮಾಣಮಾಡಲು ಕೈಕೊಡಿಸಿ: ಅಬೂಭಕ್ಕರ್ ಪೂಪಿ
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಿಂದ ಮಾಹಿತಿ
ಸುಳ್ಯ: ನೂರೇ ಅಜ್ಮೀರ್ 4ನೇ ವಾರ್ಷಿಕ ಸಂಗಮ ‘ಆಧ್ಯಾತ್ಮಿಕ ಮಜ್ಲಿಸ್’, ಕವಿಗೋಷ್ಠಿ ಹಾಗೂ ಇಕ್ಬಾಲ್ ಬಾಳಿಲ ರಚಿಸಿದ ‘ಮಾದಕತೆ ಮಾರಣಾಂತಿಕ’ ಅಧ್ಯಯನಾತ್ಮಕ ಪುಸ್ತಕ ಬಿಡುಗಡೆ ಕಾರ್ಯಕ್ರಮ ಡಿ.26ರಂದು ಪುತ್ತೂರು ಸುದಾನ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಎಸ್‌ಕೆಎಸ್‌ಎಸ್‌ಎಫ್ ಹಾಗೂ ನೂರೇ ಅಜ್ಮೀರ್ ವಾರ್ಷಿಕ ಸಂಗಮದ ಸ್ವಾಗತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಕೆಎಸ್‌ಎಸ್ಎಫ್ ಸುಳ್ಯ ವಲಯ ಕಾರ್ಯದರ್ಶಿ
ಶರೀಫ್ ಭಾರತ್ ಬಾಳಿಲ
‘ಮಾದಕ ವ್ಯಸನದ ಕುರಿತು ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಉಪಾಧ್ಯಕ್ಷ ಇಕ್ಬಾಲ್ ಬಾಳಿಲ ರಚಿಸಿದ 300 ಪುಟಗಳ 35 ಅಧ್ಯಾಯಗಳ ‘ಮಾದಕತೆ ಮಾರಣಾಂತಿಕ ಅಧ್ಯಯನ ಪುಸ್ತಕ ನೂರೇ ಅಜ್ಮೀರ್ 4ನೇ ವಾರ್ಷಿಕ ಮಹಾಸಂಗಮದ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.
ಸಂಜೆ 4ಗಂಟೆಗೆ ಪುಸ್ತಕ ಬಿಡುಗಡೆ ಪ್ರಯುಕ್ತ ರಾಜ್ಯಮಟ್ಟದ ಬಹು ಭಾಷಾ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ರಾಜ್ಯದ ಪ್ರಸಿದ್ಧ ಕವಿಗಳಿಂದ ಕವನ ವಾಚನ ನಡೆಯಲಿದೆ. ಈ ಸಭೆಯಲ್ಲಿ ಪುತ್ತೂರು ನಗರ ಠಾಣಾಧಿಕಾರಿ ಆಂಜನೇಯ ರೆಡ್ಡಿ ಮುಖ್ಯ ಭಾಷಣ ಮಾಡಲಿದ್ದಾರೆ.ಸಂಜೆ 5ಗಂಟೆಗೆ ನಡೆಯಲಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸ್ಪೀಕರ್ ಯು. ಟಿ. ಖಾದರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ, ಹಿಂದುಸ್ಥಾನ್ ಗೋಲ್ಡ್ ಕಂಪನಿ ಸ್ಥಾಪಕ ಡಾ. ಸಿ.ಕೆ ಮೌಲಾ ಶರೀಫ್, ಖ್ಯಾತ ಉದ್ಯಮಿ ವೆಂಕಟೇಶ್ ಬೆಂಗಳೂರು, ಅನಿ ಸಂಸ್ಥೆಯ ಸ್ಥಾಪಕ ಲತೀಫ್ ಗುರುಪುರ, ಶರೀಫ್ ಹಾಜಿ, ಡಾ. ಬಶೀರ್ ,ಬೆಂಗಳೂರು ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್ ಸೇರಿದಂತೆ ಹಲವು ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
ಎಂದವರು ಹೇಳಿದರು.
ಎಸ್‌ಕೆಎಸ್ಎಸ್‌ಎಫ್ ಸುಳ್ಯ ವಲಯ ಅಧ್ಯಕ್ಷ ಹಾಗೂ ನೂರೇ ಅಜ್ಮೀರ್ 4ನೇ ವಾರ್ಷಿಕ ಸಂಗಮದ ಸ್ವಾಗತ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಪೂಪಿ ಕನಕಮಜಲು ಮಾತನಾಡಿ ‘ನೂರೇ ಅಜ್ಮೀರ್ ಒಂದು ಇಸ್ಲಾಮಿಕ್ ಆಧ್ಯಾತ್ಮಿಕ ಕಾರ್ಯಕ್ರಮ. ಲಕ್ಷಾಂತರ ವಿಶ್ವಾಸಿಗಳ ಸಾಂತ್ವನದ ಅಭಯ ಕೇಂದ್ರವಾಗಿರುವ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸಿನ 4ನೇ ವಾರ್ಷಿಕ ಮಹಾ ಸಂಗಮ ಪುತ್ತೂರಿನಲ್ಲಿ ನಡೆಯಲಿದ್ದು ಹಲವಾರು ಉಲಮಾ, ಉಮರಾ ನಾಯಕರುಗಳು ಭಾಗವಹಿಸಲಿದ್ದಾರೆ ಈ ಕಾರ್ಯಕ್ರಮವನ್ನು ಲಕ್ಷಾಂತರ ಮಂದಿ ವಿಕ್ಷೀಸುತ್ತಾರೆ ಅದರಿಂದ ಈ ಕಾರ್ಯಕ್ರಮದ ಮೂಲಕ ಮಾದಕ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರಯತ್ನ ಪಡುವಂತಹ ಕೆಲಸ ಅಗುತ್ತ ಇದೆ ಎಂದು ಹೇಳಿದರು. ಇದು ಆರಂಭಿಸಿ ಮೂರು ವರ್ಷ ಕಳೆದು 4ನೇ ವಾರ್ಷಿಕಕ್ಕೆ ತಲುಪಿದೆ. ಈ ಸಂಗಮಕ್ಕೆ ಲಕ್ಷಾಂತರ ಮಂದಿ ವೀಕ್ಷಕರಿದ್ದಾರೆ. ಪುತ್ತೂರಿನಲ್ಲಿ ಸಂಗಮಿಸುವ ಈ ಕಾರ್ಯಕ್ರಮದಲ್ಲಿ ಒಟ್ಟು 25ರಿಂದ 30ಸಾವಿರ ಜನ ಸೇರುವ ನಿರೀಕ್ಷೆಯಿದೆ.
ನೂರೇ ಅಜ್ಮೀರ್ 4ನೇ ವಾರ್ಷಿಕ ಮಹಾ ಸಂಗಮ ಆದ್ಯಾತ್ಮಿಕ ಮಜ್ಲಿಸ್ ಡಿ.26 ರಂದು ಸಂಜೆ 7:30ಕ್ಕೆ ಆರಂಭಗೊಳ್ಳಲಿವೆ. ಸ್ವಾಗತ ಸಮಿತಿ ಅಧ್ಯಕ್ಷ ಅಶ್ರಫ್ ಷಾ ಮಾಂತುರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಉಸ್ತಾದ್ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ಮಜ್ಲಿಸ್ ನೇತೃತ್ವ ವಹಿಸಲಿದ್ದಾರೆ. ಪುತ್ತೂರು ತಂಙಳ್ ದುಆಃ ನೇತೃತ್ವ ವಹಿಸಲಿದ್ದು, ಝೈನುಲ್ ಅಭಿದೀನ್ ತಂಙಳ್, ಸಮಸ್ತ ಮುಶಾವರ ಸದಸ್ಯರಾಗಿರುವ ಬಂಬ್ರಾಣ ಉಸ್ತಾದ್, ಉಸ್ಮಾನುಲ್ ಫೈಝಿ ತೋಡಾರ್ ಸೇರಿದಂತೆ ಹಲವು ಮಹನೀಯರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇಕ್ಬಾಲ್ ಬಾಳಿಲ ಮಾತನಾಡಿ
ಮಾದಕತೆ ಮಾರಣಾಂತಿಕ ಪುಸ್ತಕದ ಬಗ್ಗೆ ವಿವರಣೆ ನೀಡಿ ಇಂದು ವಿದ್ಯಾರ್ಥಿಗಳ ಭವಿಷ್ಯವನ್ನು ಛಿದ್ರ ಗೊಳಿಸಿದ ಅದೆಷ್ಟೋ ಕುಟುಂಬಗಳನ್ನು ಬೀದಿ ಪಾಲು ಮಾಡಿದ ಮಾದಕ ವಸ್ತುಗಳನ್ನು ಮಾರಾಟ ಮಾಡುವ ದುಷ್ಟ ಮಾಫಿಯಗಳ ಕುರಿತು, ಕಮರಿ ಹೋದ ಎಳೆ ಜೀವಗಳ ಕರುಣಾಜನಕ ನೈಜ ಕಥೆಗಳು ಹಾಗೂ ಅದರ ಭಯಾನಕತೆ, ಪರಿಹಾರ ಮಾರ್ಗಗಳ ಕುರಿತು ಅಧ್ಯಯನ ನಡೆಸಿ ಬರೆದ ಅಧ್ಯಯಾನಾತ್ಮಕ ಪುಸ್ತಕವಾಗಿರುತ್ತದೆ ‘ಮಾದಕತೆ ಮಾರಣಾಂತಿಕ’ ಎಂದು ವಿವರಿಸಿದರು.ಮಾದಕ ಮುಕ್ತ ಸಮಾಜ ರೂಪಿಸಲು ಒಂದು ವರ್ಷಗಳ ಕಾಲ ಅಭಿಯಾನ ಆರಂಭಿಸಲಿದೆ. ನೂರೇ ಅಜ್ಮೀರ್ ಮಜ್ಲಿಸ್ ಸಂಗಮದಲ್ಲಿ 25 ಸಾವಿರ ಮಂದಿ ಮಾದಕ ಮುಕ್ತ ಸಮಾಜ ಪರಿವರ್ತನೆಯ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಕೆಎಸ್ಎಸ್‌ಎಫ್ ಜಿಲ್ಲಾ ಆರ್ಗನೈಸಿಂಗ್ ಚೆಯರ್‌ಮೆನ್
ಅಕ್ಟರ್ ಕರಾವಳಿ, ಎಸ್‌ಕೆಎಸ್ಎಸ್‌ಎಫ್ ಸುಳ್ಯ ವಲಯ ಜೊತೆ ಕಾರ್ಯದರ್ಶಿ ಇಕ್ಬಾಲ್ ಸುಣ್ಣಮೂಲೆ ಉಪಸ್ಥಿತರಿದ್ದರು.