ಬಾಲ ವಿಕಾಸ ಸಮಿತಿ ಅಂಗನವಾಡಿ ಕೇಂದ್ರ ಇದರ ಧ್ವಜಸ್ಥಂಭ ಉದ್ಘಾಟನೆ ಕ್ರೀಡಾ ಸಾಮಗ್ರಿಗಳ ಉದ್ಘಾಟನೆ ಹಾಗೂ ದಾನಿಗಳಿಗೆ ಸನ್ಮಾನ

0

ಮರ್ಕಂಜ ರೆಂಜಾಳ ಬಾಲವಿಕಾಸ ಸಮಿತಿ ಅಂಗನವಾಡಿ ಕೇಂದ್ರ ಇದರ ವತಿಯಿಂದ ಧ್ವಜ ಸ್ತಂಭ ಉದ್ಘಾಟನೆ ಕ್ರೀಡಾ ಸಾಮಗ್ರಿ ಗಳ ಉದ್ಘಾಟನೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಜನವರಿ 21 ರಂದು ನಡೆಯಿತು.
Markanja ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗೀತಾ ಹೊಸೋಲಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು.


ಮುಖ್ಯ ಅಥಿತಿಗಳಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್, ಶಿಶು ಅಭಿವೃದ್ಧಿ ಯೋಜನೆ ಸುಳ್ಯದ ಪ್ರಭಾರ ಸಿ ಡಿ ಪಿ ಓ ಶ್ರೀಮತಿ ಶೈಲಜ ಬಿ., ಸುಳ್ಯ ಅಟಲ್ ಚಾರಿಟೇಬಲ್ ಟ್ರಸ್ಟ್ ಸುಳ್ಯದ ಅಧ್ಯಕ್ಷ ಹರೀಶ್ ಕಂಜಿಪಿಲಿ, ಧ್ವಜ ಸ್ಥoಬದ ದಾನಿ ಮಣಿವರ್ಮ ಕಾಡುತೋಟ, ಉಯ್ಯಾಲೆ ದಾನಿ ತಮ್ಮಪ್ಪ ಗೌಡ ಪೂoಬಾಡಿ, ರೆಂಜಾಳ ಶಾಸ್ತ್ರವು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ, ಬೊಮ್ಮಾರು ಗಜಾನನ ಮಿತ್ರ ಮಂಡಳಿಯ ದಿನೇಶ್ ಬೊಮ್ಮರು, ಗಜಾನನ ಯುವತಿ ಮಂಡಲ ಬೊಮ್ಮಾರು ಇದರ ಅಧ್ಯಕ್ಷೆ ಶ್ರೀಮತಿ ಪ್ರತಿಮಾ ಆಚರಿಮೂಲೆ, ಮಹಾಪೋಷಕರಾದ ಜನಾರ್ಧನ ಮಾಪಲಕಜೆ, ಶ್ರೀಮತಿ ವಿದ್ಯಾ ರಮೇಶ್ ಭಟ್ ಬೇರಿಕೆ, ಜನಾರ್ಧನ ನಾಯ್ಕ ಬೊಮ್ಮಾರು, ಕುಮಾರಸ್ವಾಮಿ ರೆಂಜಾಳ, ಕಾರ್ಯದರ್ಶಿ ಪದ್ಮಾವತಿ ವೇದಿಕೆಯಲ್ಲಿದ್ದರು.


ವಲಯ ಮೇಲ್ವಿಚಾರಕಿ ದೀಪಿಕಾ ಆರಂತೋಡು ಸ್ವಾಗತಿಸಿದರು.
ನಿತ್ಯಾನಂದ ಭೀಮಗುಳಿ ಕಾರ್ಯಕ್ರಮ ನೀರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ರತ್ನವತಿ ವಂದಿಸಿದರು. ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಕವಿನ ಬಾನೂರು ವರದಿ ವಾಚಿಸಿದರು.