ಅಧ್ಯಕ್ಷರಾಗಿ ಪಿ.ಎಸ್.ಗಂಗಾಧರ್ ಆಯ್ಕೆ
ಉಬರಡ್ಕ ಶ್ರೀ ನರಸಿಹ ಶಾಸ್ತಾವು ದೇವರ ವಾರ್ಷಿಕ ಜಾತ್ರಾ ಉತ್ಸವವು ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು, ಸಮಾಲೋಚನಾ ಸಭೆಯು ಜ. 20 ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾಗಿ ಪಿ.ಎಸ್ ಗಂಗಾಧರ್, ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಉಬರಡ್ಕ, ಕೋಶಾಧಿಕಾರಿಯಾಗಿ ಶೀನಪ್ಪ ಗೌಡ ಸೂರ್ಯಮನೆ, ಸಂಚಾಲಕರಾಗಿ ವಿಜಯಕುಮಾರ್ ಉಬರಡ್ಕ, ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎಸ್. ಜತ್ತಪ್ಪ ಗೌಡ, ಸದಸ್ಯರಾದ ದಿವಾಕರ ಕೆ., ಶಿವರಾಮ ಎಂ. ಪಿ., ಗಂಗಾಧರ ನಾಯರ್, ಸರೋಜಿನಿ ಎಸ್. ಶೆಟ್ಟಿ ವಾರಿಜ ಮಂಜಿಕಾನ, ಸುಮಲತಾ ಜಗದೀಶ್, ನಾರಾಯಣ ಎ. ಅರ್ಚಕರುಗಳಾದ ಕೆ. ವೆಂಕಟ್ರಮಣ ಭಟ್, ಮದ್ವರಾಜ್ ಭಟ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಸುರೇಶ ಎಂ. ಹೆಚ್. ಮಾಜಿ ಅಧ್ಯಕ್ಷರಾದ ರತ್ನಾಕರ ಗೌಡ, ಬಳ್ಳಡ್ಕ, ಸದಸ್ಯರಾದ ಶಾರದಾ ಡಿ. ಶೆಟ್ಟಿ, ಗಿರಿಧರ ದಾಸ್, ವಿಜಯಕುಮಾರ್ ಉಬರಡ್ಕ ಮತ್ತು ಊರವರು ಭಾಗವಹಿಸಿದ್ದರು.